ಚೆಟ್ಟಳ್ಳಿ, ಜು. 11: ಮಾದಾಪುರದಿಂದ ಗರ್ವಾಲೆಗೆ ತೆರಳುವ ಮಾರ್ಗ ಮಧ್ಯೆ ಶಿರಂಗಳ್ಳಿ ಎಂಬಲ್ಲಿ ವಿದ್ಯುತ್ ಕಂಬವೊಂದು ರಸ್ತೆಗೆ ಅದರ ತಲೆಯನ್ನು ಚಾಚಿ ಅಪಾಯವನ್ನು ತಂದೊಡ್ಡುತ್ತಿದೆ. ಕಿರಿದಾದ ರಸ್ತೆಯ ಉದ್ದಕ್ಕೂ ಹಲವಾರು ವಿದ್ಯುತ್ ಕಂಬಗಳನ್ನು ಅದರ ಟಿ ಕ್ಲಾಮ್ಪ್ ಜೋಡಿಸಿ ಹಾಕಲಾಗಿದ್ದು, ನಾಲ್ಕು ಚಕ್ರ ವಾಹನಕ್ಕೂ ಅದು ಅಪಾಯ ತರುತ್ತಿದೆ. ಹೆಚ್ಚಾಗಿ ಗ್ರಾಮದ ಜನರು ದ್ವಿಚಕ್ರ ವಾಹನವನ್ನೇ ಅವಲಂಭಿತರಾಗಿ ರುವುದರಿಂದ, ರಸ್ತೆಯ ಇಕ್ಕೆಲೆಗಳಲ್ಲಿ ಕಾಡು ಬೆಳೆದು ಕಂಬವು ಒಳಗೆ ಹುದುಗಿಹೋಗಿದೆ. ಸಂಬಂಧಪಟ್ಟವರು ಶೀಘ್ರವೇ ಕಂಬವನ್ನು ತೆರವುಗೊಳಿಸದಿದ್ದಲ್ಲಿ ದ್ವಿಚಕ್ರದಲ್ಲಿ ತೆರಳುವ ಸಾರ್ವಜನಿಕ ಹಾಗೂ ಗ್ರಾಮಸ್ಥರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ.