ಶನಿವಾರಸಂತೆ, ಜು. 11: ಶನಿವಾರಸಂತೆಯ ಗುಂಡೂರಾವ್ ಬಡಾವಣೆಯ ಸಮೀಪದ ಸಂತೆ ಮಾರುಕಟ್ಟೆಯಲ್ಲಿ ಶನಿವಾರ ನಡೆಯ ಬೇಕಿದ್ದ ಸಂತೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಮುಂದಿನ ಆದೇಶದ ವರೆಗೆ ರದ್ದುಗೊಳಿ ಸಲಾಗಿದ್ದರೂ,

ಇಂದು ಸಂತೆ ವ್ಯಾಪಾರಕ್ಕೆಂದು ಬಂದ ವ್ಯಾಪಾರಿಗಳು ಸಂತೆ ಮಾರುಕಟ್ಟೆಯ ಹೊರಭಾಗದಲ್ಲಿ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು.

ಈ ಬಗ್ಗೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸರ್ದಾರ್ ಅಹಮದ್ ಹಾಗೂ ಬ್ರೈಟ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕಿ ಹೇಮಾ ಅವರುಗಳು ಪತ್ರಿಕೆಯೊಂದಿಗೆ ಮಾತನಾಡುತ್ತಾ, ಸಂತೆ ಮಾರುಕಟ್ಟೆಯ ಹೊರಭಾಗದ ರಸ್ತೆಯ ಎರಡು ಬದಿಯಲ್ಲಿ ಅಂತರ ಕಾಯ್ದುಕೊಳ್ಳದೆ ಸಂತೆ ನಡೆಯುತ್ತಿದೆ. ಇದರ ಬದಲು ವಿಸ್ತಾರವಾದ ಮಾರುಕಟ್ಟೆಯಲ್ಲೆ ಸಂತೆ ನಡೆಸಲು ಅನುವು ಮಾಡಿಕೊಡ ಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.