ನಾಪೆÉÇೀಕ್ಲು, ಜು. 11: ನಾಪೆÉÇೀಕ್ಲು ಗ್ರಾಮ ಪಂಚಾಯಿತಿಯಲ್ಲಿ ಕೊರೊನಾ ಮುಂಜಾಗ್ರತೆ ಬಗ್ಗೆ ತುರ್ತು ಸಭೆಯನ್ನು ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮುರಳೀಧರ್ ಕರುಂಬಮ್ಮಯ್ಯ ಮಾರಕ ರೋಗ ಕೊರೊನಾ ಈಗಾಗಲೇ ಗ್ರಾಮೀಣ ಪ್ರದೇಶಕ್ಕೂ ಆವರಿಸಿದ್ದು, ನಾಡಿನ ಜನರು ಜಾಗೃತೆಯಿಂದ ಇರಬೇಕು ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. 60 ವರ್ಷ ಮೇಲ್ಪಟ್ಟ ವೃದ್ಧರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದೆಂದರು. 10 ವರ್ಷದ ಕೆಳಗಿನ ಮಕ್ಕಳು ಸಹ ಮನೆಯಲ್ಲಿ ಇರಬೇಕೆಂದ ಅವರು, ನಗರದಲ್ಲಿ ಅನವಶ್ಯಕವಾಗಿ ತಿರುಗುವವರ ಮೇಲೆ ಪೊಲೀಸರು ಕ್ರಮಕೈಗೊಳ್ಳಬೇಕೆಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಚೇಂಬರ್ ಅಧ್ಯಕ್ಷ ತಮ್ಮಯ್ಯ ಮಾತನಾಡಿ, ನಾಪೆÉÇೀಕ್ಲು ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ಅಂಗಡಿಗಳನ್ನು ತೆರೆಯುವಂತೆ ಮತ್ತು ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅಂಗಡಿಗಳನ್ನು ತೆರೆಯುವಂತೆ ಹೇಳಿದರು. ಪ್ರತಿಯೊಬ್ಬ ಅಂಗಡಿ ಮಾಲೀಕರು ಮಾಸ್ಕ್‍ನ್ನು ಕಡ್ಡಾಯವಾಗಿ ಹಾಕುವುದರೊಂದಿಗೆ ಅಂತರವನ್ನು ಕಾಯ್ದುಕೊಳ್ಳಬೇಕೆಂದರು.

ಸಭೆಯಲ್ಲಿ ಅಬಕಾರಿ ಇಲಾಖೆ ಅಧೀಕ್ಷಕಿ ಬಿಂಧುಶ್ರೀ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಕಾಳೆಯಂಡ ಸಾಬ ತಿಮ್ಮಯ್ಯ, ಎಂ.ಎ. ಮನ್ಸೂರ್ ಅಲಿ, ಅಂಬಿ ಕಾರ್ಯಪ್ಪ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಗದೀಶ್, ಕುಶು ಕುಶಾಲಪ್ಪ, ಪಿ.ಡಿ.ಒ. ಚೋಂದಕ್ಕಿ, ಮತ್ತಿತರರು ಇದ್ದರು.