ಮಡಿಕೇರಿ, ಜು. 10: ಸರ್ಕಾರದ ನಿಯಮಾನುಸಾರ 14 ದಿನಗಳ ಕಾಲ ನಿಯಂತ್ರಿತ ವಲಯ ಎಂದು ಘೋಷಿಸಲಾದ 8 ನಿಯಂತ್ರಿತ ಪ್ರದೇಶಗಳ ನಿರ್ಬಂಧ ತೆರವುಗೊಳಿಸಲಾಗಿದೆ.
ಬಿಟ್ಟಂಗಾಲ, ಕಗ್ಗೋಡ್ಲು, ಕೋಟೆ ಮಾರಿಯಮ್ಮ ದೇವಸ್ಥಾನ ರಸ್ತೆ, ಮಡಿಕೇರಿ, ಮುಳ್ಳೂರು, ಮಡಿಕೇರಿಯ ಪುಟಾಣಿ ನಗರ, ರಥಬೀದಿ, ಕುಶಾಲನಗರ, ತಾಳತ್ತಮನೆ, ಬಳಗುಂದಗಳಲ್ಲಿ ಸಾರ್ವಜನಿಕರು ಮುಕ್ತವಾಗಿ ಸಂಚರಿಸಬಹುದೆಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.