ಮಡಿಕೇರಿ, ಜು. 9: ಕೊಡಗು ಜಿಲ್ಲೆಯ ವಿವಿಧೆಡೆಗಳಲ್ಲಿ ಒಂದೇ ದಿನದಲ್ಲಿ ಇಪ್ಪತ್ತಾರು ಮಂದಿಗೆ ಜಾಗತಿಕ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೂ ಕೊರೊನಾ ವಿಸ್ತಾರಗೊಂಡಂತಾಗಿದೆ. ಅಲ್ಲದೆ ಒಂದು ನೂರಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿದೆ. ಈ ತನಕ 122 ಮಂದಿಗೆ ಸೋಂಕು ಗೋಚರಿಸಿದ್ದು, ಪ್ರಸ್ತುತ 105 ಮಂದಿಗೆ ಕೊರೊನಾ ಸಕ್ರಿಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಇನ್ನುಳಿದ 16 ಮಂದಿ ಗುಣಮುಖರಾಗಿದ್ದು, ಇದುವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ನಡುವೆ ಓರ್ವ ನಾಲ್ಕು ದಿನಗಳ ಹಿಂದೆಯೇ ಮೃತರಾಗಿದ್ದರು. ಇಂದು ಒಟ್ಟು 20 ನಿರ್ಬಂಧಿತ ಪ್ರದೇಶಗಳನ್ನು ತೆರೆದಿದ್ದು, ಒಟ್ಟು ಜಿಲ್ಲೆಯಾದ್ಯಂತ 58 ನಿರ್ಬಂಧಿತ ವಲಯಗಳನ್ನು ತೆರೆಯಲಾಗಿದೆ.

ಪಾರಾಣೆಯ ಕೈಕಾಡು ಗ್ರಾಮದ ನಿವಾಸಿ ಜ್ವರ ಲಕ್ಷಣಗಳಿದ್ದ 69 ವರ್ಷದ ಮಹಿಳೆ, 44 ವರ್ಷದ ಇನ್ನೋರ್ವ ಮಹಿಳೆಗೆ ಸೋಂಕು ದೃಢಪಟ್ಟಿದೆ ಅದೇ ಗ್ರಾಮದ 42 ವರ್ಷದ ಇನ್ನೋರ್ವ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಸೋಂಕು ಪತ್ತೆಯಾಗಿದೆ. ಪಾರಾಣೆಯ ಬಾವಲಿ ಗ್ರಾಮದ 35 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆ ಸೋಂಕು ದೃಢಪಟ್ಟಿದೆ. ಅಲ್ಲದೆ ಸಂಪಾಜೆ ಬಳಿಯ ಕುದುರೆಪಾಯ ಗ್ರಾಮದ ನಿವಾಸಿ ಜ್ವರ ಲಕ್ಷಣವಿದ್ದ 56 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ಕಂಡುಬಂದಿದೆ.
ಇನ್ನೊಂದೆಡೆ ತಣ್ಣಿಮಾನಿ ಗ್ರಾಮದ ಜ್ವರ ಲಕ್ಷಣವಿದ್ದ 55 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ ಸಣ್ಣಪುಲಿಕೋಟು ಗ್ರಾಮದ ಜ್ವರ ಲಕ್ಷಣವಿದ್ದ 42 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮುಂದುವರಿದು ತಲಕಾವೇರಿ, ಭಾಗಮಂಡಲದ ಜ್ವರ ಲಕ್ಷಣವಿದ್ದ 28 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಚೇರಂಬಾಣೆಯ ಕೊಟ್ಟೂರು ನಿವಾಸಿ, ಬೆಂಗಳೂರಿನಿಂದ ಹಿಂದಿರುಗಿದ್ದ
(ಮೊದಲ ಪುಟದಿಂದ) 27 ವರ್ಷದ ಪುರುಷರೊಬ್ಬರಿಗೆ ಸೋಂಕು ಕಂಡುಬಂದಿದೆ.
ಸೋಮವಾರಪೇಟೆ ತಾಲೂಕು: ಸೋಮವಾರಪೇಟೆ ತಾಲೂಕು ಮಣಜೂರು ಶಿರಂಗಾಲ ಗ್ರಾಮದ ಜ್ವರ ಲಕ್ಷಣಗಳಿದ್ದ 21, 28 ಮತ್ತು 35 ವರ್ಷದ ಮೂವರು ಪುರುಷರಿಗೆ ಸೋಂಕು ಪತ್ತೆಯಾಗಿದ್ದು, ನಂಜರಾಯಪಟ್ಟಣ ಪೈಸಾರಿಯ ಜ್ವರ ಲಕ್ಷಣಗಳಿದ್ದ 26 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಗುಡ್ಡೆಹೊಸೂರು ಗ್ರಾಮದ ಬೊಳ್ಳೂರುವಿನ 49 ವರ್ಷದ ಮಹಿಳೆಯೊಬ್ಬರಿಗೆ ಮತ್ತು ನಂಜರಾಯಪಟ್ಟಣದ ಬೆಳ್ಳಿ ಕಾಲೋನಿಯ ವಾಸಿ, ಜ್ವರ ಲಕ್ಷಣವಿದ್ದ 9 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ನಂಜರಾಯಪಟ್ಟಣದ ವಾಲ್ನೂರು ಅಭ್ಯತ್‍ಮಂಗಲ ಗ್ರಾಮದ ವಾಸಿ, ಜ್ವರ ಲಕ್ಷಣವಿದ್ದ 08 ತಿಂಗಳ ಮಗುವಿಗೆ ಮತ್ತು ಹೆಬ್ಬಾಲೆ ಗ್ರಾಮದ 23 ವರ್ಷದ ಯುವಕನಿಗೆ ಹಾಗೂ ತೊರೆನೂರು ಗ್ರಾಮದ 50 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ.
ಅಲ್ಲದೆ ಹೆಬ್ಬಾಲೆ ಗ್ರಾಮದ ಕೋವಿಡ್ ಸಂಬಂಧಿತ ಕಾರ್ಯನಿರತ 30 ವರ್ಷದ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಹೊಸದಾಗಿ 20 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದ್ದು, ಮೇಲ್ಕಾಣಿಸಿದ ಎಲ್ಲಾ ಸ್ಥಳಗಳಲ್ಲಿ ಸಾರ್ವಜನಿಕ ಸಂಪರ್ಕಕ್ಕೆ ನಿರ್ಬಂಧ ಘೋಷಿಸಲಾಗಿದೆ.