ಗೋಣಿಕೊಪ್ಪ ವರದಿ, ಜು. 10: ಎಂತಹದ್ದೇ ಹುದ್ದೆ ಅಲಂಕರಿಸಿದರೂ, ಮೂಲ ಸಂಸ್ಕøತಿ, ಆಚಾರ-ವಿಚಾರಗಳೊಂದಿಗೆ ಮುಂದೆ ಸಾಗಬೇಕು ಎಂಬ ಸಂದೇಶ ಸಾರುವ ತಗ್‍ರ್ದಿ (ಗತ್ತು) ಕಿರುಚಿತ್ರ ಬಿಡುಗಡೆಯಾಯಿತು. ಒಟ್ಟು 18 ನಿಮಿಷದ ಚಿತ್ರದಲ್ಲಿ ನಟನೆಯೊಂದಿಗೆ ಮಾತಿಲ್ಲದೆ ಸಿನೆಮಾ ಮೂಡಿ ಬಂದಿದೆ.

ಕೊಡವರು ಸಂಪ್ರದಾಯ ಬಿಟ್ಟು ನಡೆಯಬೇಡಿ ಎಂಬ ಸಂದೇಶವನ್ನು ಚಿತ್ರ ಕಥೆಯಲ್ಲಿ ಮೂಡಿಸಿ, ಆನ್‍ಲೈನ್ ಮೂಲಕ ಬಿಡುಗಡೆಗೊಳಿಸಿ, ಕುಟುಂಬದ ಹಿರಿಯ ಎಂದು ನಂಬಿರುವ ಗುರು ಕಾರೊಣವನ್ನು ಪೂಜಿಸಬೇಕು. ಸಾಂಪ್ರದಾಯಿಕ ಉಡುಪು, ಆಚರಣೆ ಇತ್ಯಾದಿ ವಿಶೇಷವಾಗಿ ಬಿಂಬಿಸಲಾಗಿದೆ.

ಸಿನೆಮಾದಲ್ಲಿ ಹೊರಗಿನಿಂದ ಬಂದ ರಾಜಕೀಯ ತಂಡಕ್ಕೆ ಮನಸೋತು ಆಚಾರ-ವಿಚಾರವನ್ನು ಬಿಟ್ಟು ತೊಲಗುವ ಯುವ ಜನಾಂಗ, ತಾನು ಬಿಟ್ಟು ಹೋಗಿದ್ದ ಸಾಂಪ್ರದಾಯಿಕ ಉಡುಪು ತೊಟ್ಟವರನ್ನು ಕಂಡು ಮತ್ತೆ ಅದೇ ಸಂಪ್ರದಾಯಕ್ಕೆ ಸೇರಿಕೊಳ್ಳುವುದು ಚಿತ್ರದಲ್ಲಿದೆ.

ಯುಕೋ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಕಥೆಯನ್ನು ಯುವ ನಿರ್ದೇಶಕಿ ಕಳ್ಳಿಚಂಡ ದೀನಾ ಉತ್ತಪ್ಪ ನಿರ್ದೇಶಿಸಿದ್ದಾರೆ. ಹಿರಿಯರ ಪಾತ್ರದಲ್ಲಿ ಚೇಂದಂಡ ಚುಮ್ಮಿ ಪೂವಯ್ಯ ಉತ್ತಮವಾಗಿ ನಿಭಾಯಿಸಿದ್ದಾರೆ. ಕಲಾವಿದ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ, ಉಳುವಂಗಡ ಲೋಹಿತ್ ಭೀಮಯ್ಯ ಹಾಗೂ ತಂಡ ಇದೆ. ಲೋಕೇಶ್ ತಾವಳಗೇರಿ ಹಾಸ್ಯ ಪಾತ್ರ ನಿಭಾಯಿಸಿದ್ದಾರೆ.