ಕೂಡಿಗೆ, ಜು. 9: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಎರಡು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹೆಬ್ಬಾಲೆಯ ಬನಶಂಕರಿ ಛತ್ರದ ಬೀದಿ ಮತ್ತು ಅಂಬೇಡ್ಕರ್ ಬೀದಿಯ ಸೋಂಕಿತ ವ್ಯಕ್ತಿಗಳ ಮನೆ ನೂರು ಮೀಟರ್‍ಗಳಷ್ಟು ಪ್ರದೇಶದ ಮನೆಗಳು ಸೇರಿದಂತೆ ಅ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.

ಈ ಸಂದರ್ಭದಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜ್, ಕುಶಾಲನಗರ ಡಿವೈಎಸ್‍ಪಿ ಎಚ್.ಎಂ. ಶೈಲೇಂದ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಸುನಿಲ್, ಕೊರೊನಾ ನೋಡಲ್ ಅಧಿಕಾರಿ ವರದರಾಜ್, ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ಸೀಮ, ಅಭಿವೃದ್ಧಿ ಅಧಿಕಾರಿ ರಾಕೇಶ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

ಹೆಬ್ಬಾಲೆ ಸಮೀಪದ ಮಣಜೂರು ಗ್ರಾಮದಲ್ಲಿ ಕೊರೊನಾ ಸೋಂಕು ಒಬ್ಬರಿಗೆ ಪತ್ತೆಯಾಗಿ ಅ ವ್ಯಕ್ತಿ ಮನೆಯ ನೂರು ಮೀಟರ್‍ವರೆಗೆ ಸೀಲ್ ಡೌನ್ ಮಾಡಲಾಗಿದೆ.

ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮದ ಪ್ರಮುಖ ಬೀದಿಯ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ಆ ಬೀದಿಯನ್ನೂ ಸೀಲ್ ಡೌನ್ ಮಾಡಲಾಗಿದೆ.

ಪಂಚಾಯಿತಿ ಸೀಲ್ ಡೌನ್

ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಎರಡು ಸಿಬ್ಬಂದಿಗೆ ಕೊರೊನಾ ಸೋಂಕು ಇದೆ ಎಂದು ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯನ್ನು ಕೂಡ ಸೀಲ್ ಡೌನ್ ಮಾಡಲಾಗಿದೆ

ಸೋಂಕಿತ ವ್ಯಕ್ತಿಯು ಇಂದು ಗ್ರಾಮ ಪಂಚಾಯಿತಿ ಕಚೇರಿಯ ಒಳಗಡೆ ಪ್ರವೇಶ ಮಾಡಿ ಗ್ರಾಮ ಪಂಚಾಯಿತಿಯ ಬ್ಯಾಂಕ್ ಚೆಕ್ ಅನ್ನು ತೆಗೆದುಕೊಂಡು ಹೆಬ್ಬಾಲೆ ಬ್ಯಾಂಕ್‍ಗೆ ಹೋಗಿ ಹಣದ ವ್ಯವಹಾರ ಮಾಡಿರುತ್ತಾರೆ ಎಂದು ತಿಳಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯನ್ನು ಸೀಲ್ ಡೌನ್ ಮಾಡಲಾಗಿದೆ.