ಶನಿವಾರಸಂತೆ, ಜು. 10: ಸಾಮಥ್ರ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಮರ ಸಾಗಾಟ ಮಾಡುತ್ತಿದ್ದ ಲಾರಿಯ (ಕೆಎ 06- ಸಿ-8877) ಚಾಲಕ ಲೋಕೇಶ್ ಎಂಬವರಿಗೆ ಸ್ಥಳೀಯ ಪೊಲೀಸರು ಕಾನೂನು ಕ್ರಮ ಜರುಗಿಸಿ ಸಾರಿಗೆ ಪ್ರಾಧಿಕಾರ ಮುಖಾಂತರ ರೂ.11,900 ದಂಡ ವಿಧಿಸಿದ್ದಾರೆ. ಈ ಬಗ್ಗೆ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ದೇವರಾಜ, ಸಿಬ್ಬಂದಿಗಳಾದ ವಿವೇಕ್, ಬೋಪಣ್ಣ, ರವಿಚಂದ್ರ, ಶಫೀರ್, ಶಶಿಕುಮಾರ್ ಪಾಲ್ಗೊಂಡಿದ್ದರು.