ಗೋಣಿಕೊಪ್ಪಲು, ಜು.10: ಕೊರೊನಾ ಪಾಸಿಟಿವ್ ಪ್ರಕರಣದಿಂದ ಸೀಲ್‍ಡೌನ್ ಆದ ಗೋಣಿಕೊಪ್ಪಲುವಿನ 6ನೇ ವಿಭಾಗದ ಕೆಇಬಿ ಹಿಂಭಾಗದ 34 ಕುಟುಂಬಗಳಿಗೆ ಪಂಚಾಯ್ತಿ ಸದಸ್ಯ ಜಮ್ಮಡ ಕೆ.ಸೋಮಣ್ಣ ಆಶಾ ಕಾರ್ಯಕರ್ತರ ಮೂಲಕ ಅಗತ್ಯ ಸಾಮ ಗ್ರಿಗಳಾದ ಅಕ್ಕಿ ಹಾಗೂ ತರಕಾರಿಯನ್ನು ಉಚಿತವಾಗಿ ನೀಡಿದರು. ಈ ಸಂದರ್ಭ ಸದಸ್ಯ ಮುರುಗ, ಹಾಜರಿದ್ದರು.