ಮಡಿಕೇರಿ, ಜು. 10 : ಕಾಫಿ ತೋಟವೊಂದರ ಬದಿಯಲ್ಲಿರುವ ಮರಗಳು ಬೀಳುವ ಹಂತದಲ್ಲಿದ್ದು, ಅವುಗಳನ್ನು ತೆರವುಗೊಳಿಸುವಂತೆ 7ನೇ ಹೊಸಕೋಟೆ ನಿವಾಸಿ ಕೆ.ಕೆ. ರಾಜೇಂದ್ರ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದಾರೆ. ತನ್ನ ಮನೆಯ ಪಕ್ಕದ ತೋಟದಲ್ಲಿ 10 ರಿಂದ 15 ಸಿಲ್ವರ್ ಮರಗಳು ಬೃಹತ್ ಗಾತ್ರದಲ್ಲಿ ಬೆಳೆದು ಇದೀಗ ಒಣಗಿ ಹೋಗಿದ್ದು, ಯಾವುದೇ ಸಂದರ್ಭ ತನ್ನ ಮನೆ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.