ಸಿದ್ದಾಪುರ, ಜು. 9: ಎರಡು ದ್ವಿಚಕ್ರ ವಾಹನಗಳ ನಡುವೆ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡಿರುವ ಘಟನೆ ಸಿದ್ದಾಪುರದಲ್ಲಿ ಸಂಭವಿಸಿದೆ.

ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ಎರಡು ಬೈಕ್‍ಗಳ ನಡುವೆ ನಡೆದ ಅಪಘಾತದಲ್ಲಿ ಸಿದ್ದಾಪುರದ ಮೈಸೂರು ರಸ್ತೆಯ ನಿವಾಸಿಗಳಾದ ವೇಣು ಅಯ್ಯಪ್ಪ ಹಾಗೂ ಹಿಂಬದಿ ಸವಾರ ರಾಜೇಶ್ ಹಾಗೂ ಇನ್ನೊಂದು ಬೈಕಿನಲ್ಲಿದ್ದ ಅಜೇಶ್ ಹಾಗೂ ಹಿಂಬದಿ ಸವಾರ ಶ್ರೀಜಿತ್ ಈ ನಾಲ್ವರಿಗೆ ತಲೆ ಕಾಲುಗಳಿಗೆ ಗಾಯವಾಗಿದೆ. ಗಾಯಾಳುಗಳಿಗೆ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಠಾಣೆ ಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.