ಸಿದ್ದಾಪುರ, ಜು. 9: ಸೀಲ್‍ಡೌನ್ ಮಾಡಿರುವ ಹೊಲಮಾಳ ಗ್ರಾಮದಲ್ಲಿ ಕೊಡಗು ಚ್ಯಾರಿಟೇಬಲ್ ಚನ್ನಯ್ಯನಕೋಟೆ ಗ್ರೂಪ್ ವತಿಯಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ತರಕಾರಿ ಕಿಟ್ ವಿತರಣೆ ಮಾಡಲಾಯಿತು.
ಅಂದಾಜು 300 ಕುಟುಂಬಗಳಿಗೆ ಬೇಕಾದ ಅಗತ್ಯ ತರಕಾರಿ ವಸ್ತುಗಳ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜನ್, ಪ್ರಮುಖರಾದ ಹಮೀದ್ ಹಾಜಿ, ಅಜೀಜ್, ಜಮಾಅತ್ ಉಪಾಧ್ಯಕ್ಷ ಮೊಹಮ್ಮದ್ ಅಲಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ದಿನೇಶ್, ಪಂಚಾಯಿತಿ ಸದಸ್ಯರು, ಕೊಡಗು ಚಾರಿಟೇಬಲ್ ಚನ್ನಯ್ಯನಕೋಟೆ ಗ್ರೂಪ್ ಅಧ್ಯಕ್ಷ ಹೆಚ್.ಎ ಮುಸ್ತಫಾ ಇನ್ನಿತರರು ಇದ್ದರು.