ಕಡಂಗ, ಜು. 9: ನಾಡಿನ ಸರ್ವ ಸಂಘ-ಸಂಸ್ಥೆಗಳಿಗೆ ಬೆನ್ನೆಲುಬಾಗಿದ್ದ ಹಲವಾರು ಅನಿವಾಸಿಗಳು ಹಾಗೂ ಇತರರು ತಾಯ್ನಾಡಿಗೆ ಮರಳಿ ಕ್ವಾರಂಟೈನ್‍ನಲ್ಲಿದ್ದು ಅವರಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ವೀರಾಜಪೇಟೆ ಅನ್ವಾರುಲ್ ಹುದಾ ಸೆಂಟರ್ ವತಿಯಿಂದ ಕೊಡಗು ಜಿಲ್ಲಾ ಎಸ್.ವೈ.ಎಸ್. ಸಾಂತ್ವನ ವಿಭಾಗಕ್ಕೆ ಹಸ್ತಾಂತರಿಸಲಾಯಿತು.
ಅನ್ವಾರುಲ್ ಹುದಾ ಕೇಂದ್ರ ಸಮಿತಿಯ ಹಾಫಿಳ್ ಉಮರ್ ಸಖಾಫಿ, ಅಬೂಬಕರ್ ಹಾಜಿ, ಇಬ್ರಾಹಿಮ್ ಹಾಜಿ, ಲಿಯಾಖತ್ ಅಲಿ, ಅಲವಿ ಹಾಜಿ, ಯಾಕೂಬ್ ಮಾಸ್ಟರ್, ಸುಲೈಮಾನ್, ಅನ್ವಾರ್ ಯು.ಎ.ಇ. ಕಾರ್ಯದರ್ಶಿ ಮುಝಮ್ಮಿಲ್, ಹಾಫಿಳ್ ಮುಬಶ್ಶಿರ್ ಅಝ್ಹರಿ, ಜಅಫರ್ ಮಿಸ್ಬಾಹಿ ಮುಂತಾದವರು ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ, ಸಾಂತ್ವನ ವಿಭಾಗದ ಸಯ್ಯಿದ್ ಇಲ್ಯಾಸ್ ಸಖಾಫಿ ಅಲ್ ಐದರೂಸೀ, ಹಫೀಳ್ ಸಅದಿ, ಅಬೂಬಕರ್, ಇಸ್ಮಾಯಿಲ್ ಸಖಾಫಿ ಅವರುಗಳಿಗೆ ಆಹಾರ ಸಾಮಗ್ರಿಗಳನ್ನು ಹಸ್ತಾಂತರಿಸಿದರು. -ನೌಫಲ್