ನಾಪೆÇೀಕ್ಲು, ಜು. 10: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಎಕ್ಸರೇ ಯಂತ್ರ ತರಿಸಲಾಗಿದೆ. ಎಕ್ಸರೇ ತಂತ್ರಜ್ಞರ ನೇಮಕಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಗಳಿಗೆ ಪತ್ರ ಬರೆಯಲಾಗುವದು ಎಂದು ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಹೇಳಿದರು.
ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಹಿಂದೆ ಎಕ್ಸರೇ ತಂತ್ರಜ್ಞರಿದ್ದರು. ಯಂತ್ರ ಇರಲಿಲ್ಲ. ಈಗ ಯಂತ್ರ ಇದೆ. ತಂತ್ರಜ್ಞರಿಲ್ಲ. ತಂತ್ರಜ್ಞರನ್ನು ಕರೆಸಿಕೊಳ್ಳುವ ಬಗ್ಗೆ ತೀರ್ಮಾನಿಸ ಲಾಗಿತ್ತು. ಆದರೆ, ಕೊರೊನಾ ವೈರಸ್ ಕಾರಣದಿಂದ ಸಾಧ್ಯವಾಗಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ ಜಿಲ್ಲಾ ಪಂಚಾಯಿತಿ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಶುದ್ದೀಕರಣ ಘಟಕದ ಕಾಮಗಾರಿ ಕೋವಿಡ್ 19 ಕಾರಣದಿಂದ ವಿಳಂಬವಾಗಿದೆ. ಶೀಘ್ರದಲ್ಲಿಯೇ ಇದು ಪೂರ್ಣ ಗೊಳ್ಳಲಿದೆ ಎಂದರು. ಸಭೆಯಲ್ಲಿ ತುರ್ತು ಚಿಕಿತ್ಸಾ ವಾಹನ, ಸಿ.ಸಿ. ಕ್ಯಾಮರಾದ ದುರಸ್ತಿ, ಮತ್ತಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ರಕ್ಷಾ ಸಮಿತಿ ಸದಸ್ಯರಾದ ಎಂ.ಎ.ಮನ್ಸೂರ್ ಅಲಿ, ಪಿ.ಎಂ.ರಷೀದ್, ವೈದ್ಯರುಗಳಾದ ಡಾ|| ಪೂವಯ್ಯ, ಡಾ|| ಮದನ್ ಮೋಹನ್, ಡಾ|| ಕುಶಲ್, ಶುಶ್ರೂಷಕಿ ಶಶಿಕಲಾ, ಲ್ಯಾಬ್ ಟೆಕ್ನಿಷಿಯನ್ ಸುಶ್ಮಾ, ಆಸ್ಪತ್ರೆಯ ಸಿಬ್ಬಂದಿ, ಆಶಾ ಕಾರ್ಯ ಕರ್ತೆಯರು ಇದ್ದರು. ಸಭೆಯ್ಲಲಿ ಕೊರೊನಾ ವಾರಿಯರ್ಸ್ಗಳನ್ನು ಅಭಿನಂದಿಸಲಾಯಿತು.