ಶ್ರೀಮಂಗಲ, ಜು. 10 : ಗೋಣಿಕೊಪ್ಪ ರೋಟರಿ ನೂತನ ಅಧ್ಯಕ್ಷರಾಗಿ ಮೂಕಳೇರ ಬೀಟಾ ಲಕ್ಷಣ್ ಮತ್ತು ಕಾರ್ಯದರ್ಶಿಯಾಗಿ ಕಳ್ಳಿಚಂಡ ಮುತ್ತಪ್ಪ ಅಧಿಕಾರ ಸ್ವೀಕರಿಸಿದರು.

ಪೆÇನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 2020-21ನೇ ಸಾಲಿನ ನೂತನ ಆಡಳಿತ ಮಂಡಳಿಗೆ ರೋ.ಬಿ.ಬಿ ಮಾದಪ್ಪ, ಅಸಿಸ್ಟೆಂಟ್ ಗವರ್ನರ್ ವಲಯ 6ರ ಪದಗ್ರಹಣ ನೆರವೇರಿಸಿದರು. ಈ ವೇಳೆ ಗ್ರಾಮ ಪಂಚಾಯಿತಿಯ ನೌಕರರಾದ ನಂಜುಂಡ ಮತ್ತು ಮಾದೇವ ಹಾಗೂ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು. ಅತಿಥಿಗಳಾದ ಅಸ್ಟಿಟೆಂಟ್ ಗವರ್ನರ್ ಬಿ.ಬಿ. ಮಾದಪ್ಪ ನಾವು ನಮ್ಮ ಮನೆಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸಿದರೆ ಕಾರ್ಮಿಕರ ಕಾರ್ಯ ಒತ್ತಡವು ತಗ್ಗುವುದು ಎಂದು ಹೇಳಿದರು.

ಸಂಘ ಸಂಸ್ಥೆಯ ಸಹಯೋಗದೊಂದಿಗೆ ಜನಸಮುದಾಯಕ್ಕೆ ಒಳಿತಾಗುವಂತಹ ಕಾರ್ಯಕ್ರಮಗಳಿಗೆ ಒತ್ತುಕೊಡುವಂತೆ ಅವರು ಸಲಹೆ ನೀಡಿದರು.

ಗೋಣಿಕೊಪ್ಪಲು ರೋಟರಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಬೀಟಾ ಲಕ್ಷಣ್ ಈ ಕೋವಿಡ್ 19ರ ಸೋಂಕು ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಯೋಜನೆಯನ್ನು ಆದಷ್ಟು ಜಾರಿಗೆ ತರಲು ಪ್ರಯತ್ನಿಸುವುದಾಗಿ ನುಡಿದರು.

ನಿರ್ಗಮಿತ ಅಧ್ಯಕ್ಷ ಕಾಡ್ಯಮಾಡ ನವೀನ್ ಮಾತನಾಡಿ ಒಂದು ವರ್ಷದ ಅಧಿಕಾರ ಅವಧಿ ಸಂತೃಪ್ತಿ ತಂದುಕೊಟ್ಟಿದೆ ಎಂದು ತಿಳಿಸಿದರು. ಕಳೆದ ಸಾಲಿನಲ್ಲಿ ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡ ಅವರನ್ನು ಹಾಗೂ ಅವರ ತಂಡದವರನ್ನು ಅತಿಥಿಗಳು ಶ್ಲಾಘಿಸಿದರು. ರೋಟರಿ ಕ್ಲಬ್ಬಿನ ವಾರ್ತಾ ಸಂಚಿಕೆಯನ್ನು ವಲಯ ಲೆಫ್ಟಿನೆಂಟ್ ರೋ. ದಿಲನ್ ಚಂಗಪ್ಪ ಬಿಡುಗಡೆಗೊಳಿಸಿದರು.

ಇದೇ ಸಂದರ್ಭದಲ್ಲಿ ರೋಟರಿ ಗೋಣಿಕೊಪ್ಪ ವತಿಯಿಂದ ಪೆÇನ್ನಂಪೇಟೆ ಕೊಡವ ಸಮಾಜಕ್ಕೆ ಕಾಲಿನಲ್ಲಿ ಚಲಾಯಿಸುವ ಸ್ಯಾನಿಟೈಸರ್ ಡಿಸ್ಪೆನ್ಸರ್ ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭ 2020-21ನೇ ಅವಧಿಯ ನೂತನ ಆಡಳಿತ ಮಂಡಳಿಯ ಐ.ಪಿ.ಪಿ ನೆವೀನ್ ಕೆ.ಬಿ, ಉಪಾಧಕ್ಷೆ ಟಿ.ಎಂ. ಕಾವೇರಮ್ಮ, ಜಂಟಿ ಕಾರ್ಯದರ್ಶಿ ಜೆ.ಕೆ. ಸುಭಾಷಿಣಿ, ಖಜಾಂಚಿ ಕೆ.ಎಸ್. ನರೇನ್, ಸಾರ್ಜೆಂಟ್ ಎಟ್ ಆಮ್ರ್ಸ್ ಸಿ. ಲತಾಬೋಪಣ್ಣ, ನಿರ್ದೇಶಕರುಗಳಾದ ಕ್ಲಬ್ ಸರ್ವೀಸ್ ಬಿ.ಎ. ದೇಚಮ್ಮ, ಕಮ್ಯುನಿಟಿ ಸರ್ವೀಸ್ ಎಂ. ಕಿಶೋರ್ ಮಾದಪ್ಪ, ವೆಕೇಷನಲ್ ಸರ್ವೀಸ್ ಡಾ. ಕೆ.ಪಿ. ಚಿಣ್ಣಪ್ಪ, ಇಂಟರ್‍ನ್ಯಾಷನಲ್ ಸರ್ವೀಸ್ ಪಿ.ಬಿ. ಪೂಣಚ್ಚ, ಯೂತ್ ಸರ್ವೀಸ್ ಕೆ.ಎಸ್. ರಾಜೀವ್, ಚೇರ್ ಪರ್ಸನ್‍ಗಳಾದ ಪಲ್ಸ್ ಪೆÇೀಲಿಯೋ ಉಸ್ತುವಾರಿ ಡಾ. ಎಂ.ಪಿ. ಆಶಿಕ್ ಚಂಗಪ್ಪ, ಟಿ.ಆರ್.ಎಫ್ ಉಸ್ತುವಾರಿ ಎಂ.ಜಿ ನಾರಾಯಣ, ಕ್ಲಬ್ ಲಿಟರಸಿ ಕಮಿಟಿ ಕೆ.ಎನ್. ಚಂದ್ರಶೇಖರ್, ಮೆಂಬರ್‍ಶಿಫ್ ಡೆವಲಪ್‍ಮೆಂಟ್ ಉಸ್ತುವಾರಿ ಕುಮಾರಿ ಸುಭಾಷ್ ಪುತ್ತಮನೆ, ವಿನ್ಸ್ ಉಸ್ತುವಾರಿ ಎ. ಸಜನ್ ಚಂಗಪ್ಪ, ನೀರು ಮತ್ತು ನೈರ್ಮಲ್ಯ ಉಸ್ತುವಾರಿ ಪ್ರಮೋದ್ ಕಾಮತ್, ಜಿಲ್ಲಾ ಯೋಜನೆಗಳ ಉಸ್ತುವಾರಿ ಕೆ.ಎ. ತಿಮ್ಮಯ್ಯ, ಡಬ್ಲ್ಯೂ.ಇ.ಬಿ ಉಸ್ತುವಾರಿ ಎಂ.ಬಿ. ವಿಜಯ, ಬುಲ್ಲೆಟಿನ್ ಎಡಿಟರ್ ಎ. ಸುಶ್ಮಾ ಚಂಗಪ್ಪ, ಆನ್ಸ್ ಕ್ಲಬ್ ಅಧ್ಯಕ್ಷ ಪವಿತ್ರ ನೆವೀನ್, ಆನ್ಸ್ ಕ್ಲಬ್ ಕಾರ್ಯದರ್ಶಿ ಸರೀನಾ ರಾಜೀವ್ ಹಾಜರಿದ್ದರು.

ಸುಮಿಸುಬ್ಬಯ್ಯ ಪ್ರಾರ್ಥಿಸಿ, ನೂತನ ಕಾರ್ಯದರ್ಶಿ ಕೆ.ಸಿ. ಮುತ್ತಪ್ಪ ವಂದಿಸಿದರು.