ಮಡಿಕೇರಿ, ಜು. 9: ಕಳೆದ 24 ಗಂಟೆಗಳಲ್ಲಿ ತಲಕಾವೇರಿ, ಭಾಗಮಂಡಲ ಸೇರಿದಂತೆ ವೀರಾಜಪೇಟೆ ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದೆ. ಇನ್ನುಳಿದಂತೆ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಇತರೆಡೆಗಳಲ್ಲಿ ಅಲ್ಪ ಮಳೆ ದಾಖಲಾಗಿದೆ.

ಜಿಲ್ಲೆಯಲ್ಲಿ ಸರಾಸರಿ 0.66 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 0.88 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 0.86 ಇಂಚು, ಸೋಮವಾರಪೇಟೆ ತಾಲೂಕಿನಲ್ಲಿ 0.31 ಇಂಚು ದಾಖಲಾಗಿದೆ.

ಅಲ್ಲದೆ ಭಾಗಮಂಡಲ 1 ಇಂಚು, ಸಂಪಾಜೆ 1.78 ಇಂಚು, ವೀರಾಜಪೇಟೆ 1.28 ಇಂಚು, ಹುದಿಕೇರಿ 1.25 ಇಂಚು, ಪೊನ್ನಂಪೇಟೆ 0.86 ಇಂಚು, ಅಮ್ಮತ್ತಿ 1 ಇಂಚು, ಸೋಮವಾರಪೇಟೆ 0.56 ಇಂಚು, ಶಾಂತಳ್ಳಿ 0.60 ಇಂಚು ಮಳೆಯಾಗಿದೆ.