ಸಂಪಾಜೆ, ಜು. 9: ಚೆಂಬು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಪಯಸ್ವಿನಿ ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷ ಅನಂತ ಎನ್.ಸಿ. ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಹಿತರಕ್ಷಣಾ ವೇದಿಕೆ, ಕೊರೊನಾ ವಾರಿಯರ್ಸ್ ಸಭೆ ನಡೆಯಿತು.
ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೇಮಂತ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ದಿನೇಶ್ ಅಂಬಟಕಜೆ, ಮಾಧವ ಪೊಯ್ಯಮಜಲು, ಸುಬ್ರಮಣಿ ಉಪಾಧ್ಯಾಯ, ಮಾಜಿ ಉಪಾಧ್ಯಕ್ಷೆ ವನಿತಾ ವಿಜಯಾ, ಮನೋಹರ ಎನ್.ಸಿ., ಆದಂ ಕುಂಞÉ ಸಂಟ್ಯಾರ್, ಕೆ.ಜಿ. ರಮೇಶ್, ಶ್ರೀನಿವಾಸ ನಿಡಿಂಜಿ, ಚೆಂಬು ಶಾಲಾ ಅಧ್ಯಾಪಕ ಯೋಗೀಶ್ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಯಿತು. ಕೊರೊನಾ ವಾರಿಯರ್ಸ್ ಸಮಿತಿಯ ಜೊತೆಗೆ ಹಿತರಕ್ಷಣಾ ಸಮಿತಿಯನ್ನು ರಚಿಸಲಾಯಿತು.