ಮಡಿಕೇರಿ, ಜು. 9: 2019ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ರಾಜ್ಯ ಸರಕಾರದ ಶಾಲೆಗಳು, ಅನುದಾನಿತ ಶಾಲೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಶಾಲೆಗಳಲ್ಲಿನ ಖಾಯಂಗೊಂಡ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು, ಕೇಂದ್ರ ಸರಕಾರದ ಮತ್ತು ಸಿ.ಬಿ.ಎಸ್.ಇ. ಮತ್ತು ಸಿ.ಐ.ಎಸ್.ಇ. ಮಾನ್ಯತೆ ಪಡೆದ ಶಾಲೆಗಳ ಖಾಯಂಗೊಂಡ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು.

ಸ್ವಯಂ ತಾವೇ ಆನ್‍ಲೈನ್ ಮೂಲಕ hಣಣಠಿ://ಟಿಚಿಣioಟಿಚಿಟಚಿತಿಚಿಡಿಜsಣoಣeಚಿಛಿheಡಿs.mhಡಿಜ.gov.iಟಿ/ಟಿಚಿಣ/ತಿeಟಛಿome.ಚಿsಠಿx ಅಂತರ್ಜಾಲ ತಾಣದ ಮೂಲಕ ಅರ್ಜಿ ಸಲ್ಲಿಸಲು ತಾ. 6ರವರೆಗೆ ನಿಗದಿಪಡಿಸಲಾಗಿದ್ದ ಅವಧಿಯನ್ನು ತಾ. 11ರವರೆಗೆ ವಿಸ್ತರಿಸಲಾಗಿದೆ.

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಶಿಕ್ಷಕರು/ ಮುಖ್ಯ ಶಿಕ್ಷಕರು ಹಾರ್ಡ್ ಕಾಪಿ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಡಿಕೇರಿ ಇವರಿಗೆ ಸಲ್ಲಿಸುವಂತೆ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.