ಮಡಿಕೇರಿ, ಜು. 10: ಕೊಡವಾಮೆರ ಕೊಂಡಾಟದ ವತಿಯಿಂದ ತ್ರಿಭಾಷಾ ಸಾಹಿತಿಗಳಾದ ಡಾ. ಐಚೆಟ್ಟಿರ ಮುತ್ತಣ್ಣ ಹಾಗೂ ಬಾಚಮಾಡ ಗಣಪತಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಏರ್ಪಡಿಸಿದ್ದ ಕೊಡವ ಕವನ ರಚನಾ ಸ್ಪರ್ಧೆಯಲ್ಲಿ ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬೊಳ್ಳೇರ ಸುಮನ್ ತಮ್ಮಯ್ಯ ದ್ವಿತೀಯ ಹಾಗೂ ಕಂಬೆಯಂಡ ಪುಷ್ಪದೇವಯ್ಯ ತೃತೀಯ ಸ್ಥಾನಗಳಿಸಿದ್ದಾರೆ. ಒಟ್ಟು 87 ಮಂದಿ ಭಾಗವಹಿಸಿದ್ದ ಸ್ಪರ್ಧೆಯ ತೀರ್ಪುಗಾರರಾಗಿ ಆಪಾಡಂಡ ಜಗ ಮೊಣ್ಣಪ್ಪ, ಐತಿಚಂಡ ರಮೇಶ್ ಉತ್ತಪ್ಪ, ಉಳುವಂಗಡ ಕಾವೇರಿ ಉದಯ, ಸಂಚಾಲಕರಾಗಿ ಕುಲ್ಲಚಂಡ ವಿನುತ್ ಕೇಸರಿ ಕಾರ್ಯನಿರ್ವಹಿಸಿದ್ದಾರೆ ಎಂದು ಕೂಟದ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.