ಮಡಿಕೇರಿ, ಜು. 9: ರಾಜ್ಯ ಸಾರಿಗೆ ಬಸ್ ನಿಲ್ದಾಣದಿಂದ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಗುಂಡಿಗಳಾಗಿ ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡುವಂತಾಗಿದೆ. ನೂತನ ಬಸ್ ನಿಲ್ದಾಣದಿಂದ ಹೊರಬರುವ ರಸ್ತೆ ತೀರಾ ಹದಗೆಟ್ಟು ನರಕ ದರ್ಶನವಾಗತೊಡಗಿದೆ.
ಇಲ್ಲಿನ ಕೊಡವ ಸಮಾಜದ ಬಳಿ ಶ್ರೀ ಓಂಕಾರೇಶ್ವರ ದೇವಾಲಯದತ್ತ ತೆರಳುವ ರಸ್ತೆಯಲ್ಲಿ ಭಾರೀ ಗುಂಡಿಗಳೊಂದಿಗೆ ವಾಹನ ಚಾಲಕರು ಅಪಾಯ ಎದುರಿಸುವಂತಾಗಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಯ ಬಹುತೇಕ ಬಡಾವಣೆಯ ರಸ್ತೆಗಳಲ್ಲಿ ಆರಂಭಿಕ ಮಳೆಗೆ ಇಂಥ ಪರಿಸ್ಥಿತಿ ಎದುರಾಗಿದ್ದು, ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.