ಕೂಡಿಗೆ, ಜು. 9: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ನಿಂಗಪ್ಪ ಬಡಾವಣೆಯ ಎದುರು ಇರುವ ಬಡಾವಣೆಗೆ ಒಳಚರಂಡಿ ನಿರ್ಮಾಣ ಮಾಡದೆ ಇರುವುದರಿಂದ ಮನೆಗಳ ಕಲ್ಮಶ ನೀರು ರಸ್ತೆ ಮೇಲೆ ಹರಿಯುವುದಲ್ಲದೆ ಅಲ್ಲಿನ ಗುಂಡಿಗಳಲ್ಲಿ ನಿಂತು ಈ ಭಾಗದಲ್ಲಿ ರೋಗಗಳು ಹರಡುವ ಆತಂಕ ಎದುರಾಗಿದೆ. ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.