ಸೋಮವಾರಪೇಟೆ,ಜು.7: ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಬಿದ್ದ ಮರದ ರೆಂಬೆಗಳನ್ನು ತೆರವು ಗೊಳಿಸದೆ ನಿರ್ಲಕ್ಷ್ಯ ವಹಿಸಿದ ಕಾಫಿ ತೋಟದ ಮಾಲೀಕರಿಗೆ ಪಟ್ಟಣ ಪಂಚಾಯಿತಿ ನೋಟಿಸ್ ನೀಡಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕರ್ಕಳ್ಳಿ-ಬೇಳೂರು ರಸ್ತೆಯಲ್ಲಿರುವ ಕಟ್ಟೆಬಸವಣ್ಣ ದೇವಾಲಯದ ಬಳಿಯಿದ್ದ ಮರದ ಕೊಂಬೆ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆ ಯಾಗಿದ್ದರೂ ಮರವನ್ನು ತೆರವು ಗೊಳಿಸಲು ಸಂಬಂಧಿಸಿದ ತೋಟ ಮಾಲೀಕರು ಮುಂದಾಗಿರಲಿಲ್ಲ.ಕರ್ಕಳ್ಳಿ ಗ್ರಾಮ ಕೋವಿಡ್-19 ಕಂಟೈನ್‍ಮೆಂಟ್ ವಲಯವಾಗಿರುವ ದರಿಂದ ವಾಹನ ಸಂಚಾರವಿಲ್ಲದ ಹಿನ್ನೆಲೆ ಯಾವದೇ ಅನಾಹುತ ಸಂಭವಿಸಿಲ್ಲ. ಈ ನಡುವೆ ಮರದ ರೆಂಬೆಗಳನ್ನು ಕಡಿಯದಿದ್ದರೆ ಅನಾಹುತವಾಗುವ ಸಂಭವವಿದೆ. ಕೂಡಲೆ ಮರಕಪಾತು ಮಾಡಿಸಬೇಕು. ರಸ್ತೆಗೆ ಬಾಗಿರುವ ಬೇಲಿಯನ್ನು ಕಟಾವು ಮಾಡುವಂತೆ ಸ್ಥಳೀಯರು ತೋಟ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದರೂ, ಯಾವದೇ ಪ್ರಯೋಜನವಾಗಿರಲಿಲ್ಲ.
ಕಳೆದ ಮೂರು ದಿನಗಳ ಹಿಂದೆ ಮರದ ರೆಂಬೆಗಳು ರಸ್ತೆಗೆ ಬಿದ್ದಿದ್ದು, ಮಾಲೀಕ ತೆರವುಗೊಳಿಸದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ರೆಂಬೆಗಳನ್ನು ತೆರವು ಗೊಳಿಸಿದರು. ರಸ್ತೆ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರ ಗಳನ್ನು ತಕ್ಷಣ ತೆರವುಗೊಳಿಸು ವಂತೆ ಪ.ಪಂ.ನಿಂದ ತೋಟ ಮಾಲೀಕರಿಗೆ ನೋಟೀಸ್ ನೀಡಲಾಗಿದೆ ಎಂದು ಪ.ಪಂ. ಅಧಿಕಾರಿಗಳು ತಿಳಿಸಿದ್ದಾರೆ.