ಮಡಿಕೇರಿ, ಜು. 8: ತನಗೆ ಪತಿ ಹಾಗೂ ಅತ್ತೆ ಕಿರುಕುಳದೊಂದಿಗೆ, ತವರಿನಿಂದ ಹಣಕ್ಕಾಗಿ ಪೀಡಿಸುತ್ತಿರುವ ದಾಗಿ ಬಬಿತ ಎಂಬಾಕೆ ಪೊನ್ನಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಕೆಯ ಪತಿ ಅನೀಸ್ ಹಾಗೂ ಅತ್ತೆ ಅನಿತಾ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ಡಿವೈಎಸ್‍ಪಿ ಜಯಕುಮಾರ್ ಅವರ ನಿರ್ದೇಶನದಂತೆ ವೃತ್ತ ನಿರೀಕ್ಷಕ ರಾಮರೆಡ್ಡಿ ತನಿಖೆ ಕೈಗೊಂಡಿದ್ದಾರೆ.