ಗೋಣಿಕೊಪ್ಪಲು, ಜು. 8: ರೋಟರಿ ಸಂಸ್ಥೆಯ 2019-20ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭವು ಕುಶಾಲನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಗೋಣಿಕೊಪ್ಪ ರೋಟರಿ ಕ್ಲಬ್ 18 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ವಲಯ 6ರಲ್ಲಿ ಪ್ರಥಮ ಸ್ಥಾನ ಹಾಗೂ ರೋಟರಿ ಜಿಲ್ಲೆ 3181ರಲ್ಲಿ 3ನೇ ಸ್ಥಾನಕ್ಕೆ ಭಾಜನವಾಗಿದೆ. ಗೋಣಿಕೊಪ್ಪ ರೋಟರಿ ಕ್ಲಬ್‍ನ ಅಧ್ಯಕ್ಷರಾದ ಕಾಡ್ಯಮಾಡ ನೇವಿನ್ ಪ್ರಶಸ್ತಿಗಳನ್ನು ಸ್ವೀಕರಿಸಿದರು. ರೋಟರಿ ಜಿಲ್ಲೆ 3181ರಲ್ಲಿ ಮಾಡಿದ ಸಮಾಜಮುಖಿ ಕಾರ್ಯಕ್ರಮಗಳನ್ನು ಗುರುತಿಸಿ ನೀಡುವ ಈ ಪ್ರಶಸ್ತಿಯನ್ನು ರೋಟರಿ ಜಿಲ್ಲಾ ರಾಜ್ಯ ಪಾಲರಾದ ರೊಟೇರಿಯನ್ ಜೋಸೆಫ್ ಮ್ಯಾಥ್ಯು ಪ್ರಶಸ್ತಿ ಪ್ರಧಾನ ಮಾಡಿದರು. ವಲಯ 6ರ ಉಪ ರಾಜ್ಯಪಾಲರಾದ ರೊಟೆರಿಯನ್ ನಾಗೇಶ್ ಪಿ, ಹಾಗೂ ವಲಯ ಕಾರ್ಯದರ್ಶಿ ಹೆಚ್.ಟಿ.ಅನಿಲ್ ಈ ಸಂದರ್ಭ ಹಾಜರಿದ್ದರು.