ನಾಪೆÇೀಕ್ಲು, ಜು. 8: ಕಕ್ಕಬೆ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೊರೊನಾ ರೋಗದ ಬಗ್ಗೆ ಮನೆ ಮನೆಗೆ ತೆರಳಿ ಸೋಂಕು ತಡೆಗಟ್ಟಲು ಶ್ರಮಿಸಿ ಜಾಗೃತಿ ಮೂಡಿಸಿದ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಆಶಾ ಕಾರ್ಯಕರ್ತೆಯಾರಾದ ಎಂ.ಪಿ. ಮೀನಾಕ್ಷಿ, ಕುಸುಮ, ಪುಷ್ಪ, ಅಶ್ವಿನಿ, ಬೇಬಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಭಾಗ್ಯ ಹಾಗೂ ದಾದಿ ಸರಸ್ವತಿ ಅವರಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಕಲಿಯಾಟಂಡ ರಘು ತಮ್ಮಯ್ಯ ಮಾತನಾಡಿ, ಕೊರೊನಾ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಕಾರ್ಯಕರ್ತೆಯರು ಅರ್ಥಪೂರ್ಣವಾಗಿ ಶ್ರಮಿಸಿ ಕಾರ್ಯನಿರ್ವಹಿಸಿ ಜಾಗೃತಿ ನೀಡಿರುವುದು ಸ್ವಾಗತಾರ್ಹ ಎಂದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎ.ಎಸ್. ಐಯ್ಯಪ್ಪ, ನಿರ್ದೇಶಕರಾದ ಕೆ.ಎಂ. ನಾಣಯ್ಯ, ಕೆ.ಎಂ. ಬೋಪಣ್ಣ, ಬಿ.ಎಂ. ಬೆಳ್ಯಪ್ಪ, ಎ.ಎಸ್. ಲಕ್ಷ್ಮಣ, ಎಸ್.ಬಿ. ಸುನೀತ, ಕೆ.ಎ. ಅಶೋಕ, ಪಿ.ಟಿ. ಕಾರ್ಯಪ್ಪ, ಕೆ.ಕೆ. ಗಿರೀಶ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಬಿ.ಎಂ. ಸುರೇಶ್ ಬೆಳ್ಯಪ್ಪ ಸ್ವಾಗತಿಸಿ, ವಂದಿಸಿದರು.