ವೀರಾಜಪೇಟೆ, ಜು. 8: ನಗರದ ಗಣಪತಿ ದೇವಾಲಯದಿಂದ ತರಕಾರಿ ಮಾರುಕಟ್ಟೆಯವರೆಗಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗಿದೆ. ಆದರೆ ಇದು ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆಯಲ್ಲದೆ ಹಲವು ತಿಂಗಳಿಂದ ಮಾರ್ಗದ ಒಳಚರಂಡಿ ಮೇಲೆ ನಿರ್ಮಿಸಲಾದ ಸಿಮೆಂಟ್ ಸ್ಲ್ಯಾಬ್ಗಳು ಮುರಿದುಬಿದ್ದು ಗುಂಡಿಗಳಾಗಿ ಪರಿವರ್ತಿತವಾಗಿವೆ.
ಹಿಂದೆ ವೃದ್ಧರೊಬ್ಬರು ತೆರಳುವಾಗ ಆಯತಪ್ಪಿ ಬಿದ್ದ ಪರಿಣಾಮ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ದಿನನಿತ್ಯ ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸಂಚರಿಸುತ್ತಾರೆ. ಸಂತೆ ದಿನದಲ್ಲಂತೂ ಹೊರ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ನಗರಕ್ಕೆ ಆಗಮಿಸುತ್ತಾರೆ. ಸಂಬಂಧಪಟ್ಟವರು ಆದಷ್ಟು ಬೇಗ ಇತ್ತ ಗಮನಹರಿಸಿ, ಪಾದಚಾರಿ ಮಾರ್ಗ ಶೀಘ್ರ ದುರಸ್ತಿಗೊಳಿಸಿ ಪಾದಚಾರಿಗಳಿಗೆ ಮುಕ್ತ ಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.