ಶನಿವಾರಸಂತೆ, ಜು. 8: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡೂರಾವ್ ಬಡಾವಣೆಯ ನಿವಾಸಿಗಳಾದ ಆಯೀಶಾ ಕುಟುಂಬದವರಿಗೆ ಶಿರಂಗಾಲದ ಕೊರೊನಾ ಸೋಂಕು ಪೀಡಿತ ವ್ಯಕ್ತಿಯ ಸಂಪರ್ಕವಿದ್ದುದರಿಂದ ಆಯೀಶಾ ಕುಟುಂಬದವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆಯೀಶಾ ಕುಟುಂಬದವರಿಗೆ ಕೊರೊನಾದ ಯಾವದೇ ಲಕ್ಷಣಗಳು ಕಂಡು ಬಾರದ ಕಾರಣ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಕೂಲಿ ಕಾರ್ಮಿಕರಾದ ಕುಟುಂಬದವರು ಗುಂಡೂರಾವ್ ಬಡಾವಣೆಯ ತಮ್ಮ ಮನೆಗೆ ಹಿಂದಿರುಗಿದ್ದು, ಇವರಿಗೆ ಆಹಾರ ಸಾಮಗ್ರಿಗಳು ಇಲ್ಲದಿದ್ದ ಕಾರಣ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮಾನವೀಯ ದೃಷ್ಟಿಯಿಂದ ವೈಯಕ್ತಿಕವಾಗಿ ಒಂದುವಾರಕ್ಕೆ ಆಗುವಷ್ಟು ಆಹಾರ ಪದಾರ್ಥಗಳ ಕಿಟ್‍ನ್ನು ಪಂಚಾಯಿತಿ ಲೆಕ್ಕ ಸಹಾಯಕ ವಸಂತ್ ಅವರ ಮೂಲಕ ವಿತರಿಸಿದರು.