ಗೋಣಿಕೊಪ್ಪಲು, ಜು.8 : ಸಿದ್ದಾಪುರ ಕರಡಿಗೋಡು ಗ್ರಾಮದ ಇವಾಲ್ವ್ ಬ್ಯಾಕ್ ಸಂಸ್ಥೆ ವತಿಯಿಂದ ವೀರಾಜಪೇಟೆ ತಾಲೂಕಿನ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗೆ 300 ಮಾಸ್ಕ್‍ಗಳನ್ನು ಅಮ್ಮತ್ತಿಯ ಟೋಮಿ ರೊಸಾರಿಯೋ ಅವರು ಪ್ರಭಾರ ಡಿಎಫ್‍ಒ ರೋಶ್ನಿಯವರಿಗೆ ನೀಡಿದರು. ವೀರಾಜಪೇಟೆಯ ಅರಣ್ಯ ಭವನದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದ ಇವರು ಸಂಸ್ಥೆಯ ಪರವಾಗಿ ನೀಡಿರುವ ಮಾಸ್ಕ್‍ಗಳನ್ನು ಇಲಾಖೆಯ ಪ್ರತಿಯೊಬ್ಬರೂ ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕ ವಿ.ಕೆ.ಲೊಕೇಶ್ ವೀರಾಜಪೇಟೆ ಆರ್‍ಎಫ್‍ಒ ದಿಲೀಪ್ ಕಚೇರಿಯ ಸಿಬ್ಬಂದಿ ಹಾಜರಿದ್ದರು.