ಕೂಡಿಗೆ, ಜು. 8 ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೆ ಕೂಡಿಗೆಯ ಸಮೀಪದಲ್ಲಿ ಹರಿಯುವ ಕಾವೇರಿ ಮತ್ತು ಹಾರಂಗಿ ನದಿಗಳು ಸಂಗಮವಾಗುವ ಸ್ಥಳಕ್ಕೆ ತೆರಳುವ ರಸ್ತೆಯ ಸರ್ವೆ ಕಾರ್ಯ ನಡೆಯುತ್ತಿದೆ.
ಈ ಸಂಗಮಕ್ಕೆ ಹೋಗಲು ಸಮರ್ಪಕ ರಸ್ತೆ ಇಲ್ಲದೆ ಗ್ರಾಮಸ್ಥರು ಪಂಚಾಯತಿಗೆ ಮನವಿ ಸಲ್ಲಿಸಿದರು. ಅಲ್ಲದೆ ಈ ವ್ಯಾಪ್ತಿಯ ರೈತರು ತಮ್ಮ ಜಮೀನಿಗೆ ಹೋಗಲು ಬಹಳ ತೊಂದರೆ ಆಗುತ್ತಿತು. ಇದನ್ನು ಮನಗಂಡು ಗ್ರಾಮ ಪಂಚಾಯತಿ ಮೂಲಕ ಸರ್ವೆಗೆ ಪತ್ರ ವ್ಯವಹಾರ ನಡೆಸಲಾಗಿತ್ತು. ಇದೀಗ ಸರ್ವೆ ಅಧಿಕಾರಿಗಳಾದ ಮಹದೇವ, ಜೀವನ್ ತಂಡ ಸರ್ವೆ ಕಾರ್ಯವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮ ಲೀಲಾ ಸದಸ್ಯರುಗಳಾದ ರಾಮಚಂದ್ರ ಕೃಷ್ಣ, ಗ್ರಾಮದ ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ. ಕೆ.ಕೆ. ಭೀಮಣ್ಣ ಕಾರ್ಯದರ್ಶಿ ರಂಗ ಮಲ್ಲೇಶ್ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಕೆ.ಪಿ. ಸೋಮಣ್ಣ ಕೆ.ಕೆ. ಮಂಜುನಾಥ್, ಕೆ.ಟಿ. ಶ್ರೀನಿವಾಸ್ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಸ್ಥರು ಇದ್ದರು.