ಕಡಂಗ, ಜು. 8: ಎಸ್‍ಕೆಎಸ್‍ಎಸ್‍ಎಫ್ ಕಡಂಗ ಶಾಖಾ ವತಿಯಿಂದ ಕಡಂಗ ಪಟ್ಟಣದಲ್ಲಿರುವ ಎಲ್ಲಾ ದಿನಸಿ ಅಂಗಡಿ, ಹೊಟೇಲ್‍ಗಳಿಗೂ ಮತ್ತು ಆಟೋ ಚಾಲಕರಿಗೆ ಕೊರೊನಾ ವೈರಸ್ ತಡೆಗಟ್ಟುವಿಕೆಯ ಸರ್ಕಾರದ ನಿರ್ದೇಶನಗಳನ್ನು ಪಾಲಿಸಲು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು, ಅಗತ್ಯ ವಸ್ತುಗಳಿಗೆ ಮಾತ್ರ ಪಟ್ಟಣಕ್ಕೆ ಬಂದು ಉಳಿದ ಸಮಯಗಳಲ್ಲಿ ಮನೆಯಲ್ಲಿ ಇರಬೇಕು ಎಂಬ ಭಿತ್ತಿಪತ್ರಗಳನ್ನು ಪಟ್ಟಣದಾದ್ಯಂತ ವಿತರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಈ ಸಂದರ್ಭ ವಿಖಾಯ ಸದಸ್ಯ ಶಕೀರ್, ಎಸ್‍ಕೆಎಸ್‍ಎಸ್‍ಎಫ್ ಕಡಂಗ ಶಾಖಾ ಅಧ್ಯಕ್ಷ ಇಸಾಕ್, ಇಕ್ಬಾಲ್, ಸಿದ್ದಿಕ್, ಸಮದ್. ಆಟೋ ಚಾಲಕರಾದ ಮಂಜು, ಲೋಕೇಶ್, ಮುಸ್ತಫ, ಮುಂತಾದವರು ಹಾಜರಿದ್ದರು. -ನೌಫಲ್