ಪೆÇನ್ನಂಪೇಟೆ, ಜು. 7: ಪೆÇನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಶಾ ಕಾರ್ಯಕರ್ತೆಯರಾದ ಬಿ.ಕೆ. ಸುಮ, ಕೆ. ಪ್ರತಿಮ, ಹೆಚ್.ಎ. ನವ್ಯ ಹಾಗೂ ಹೆಚ್.ಕೆ. ಪೆÇನ್ನಮ್ಮ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಿ, ರೂ. 3000 ಸಹಾಯಧನ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಕಂದಾ ಸುಬ್ಬಯ್ಯ ಅವರು ಸನ್ಮಾನಿತರನ್ನು ಸ್ವಾಗತಿಸಿ, ಮಾತನಾಡಿ, ಆಶಾ ಕಾರ್ಯಕರ್ತೆಯರು ಈ ಕೋವಿಡ್-19 ಸೋಂಕಿನ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಜೊತೆ ಕೈಜೋಡಿಸಿ ತಮ್ಮ ಜೀವದ ಹಂಗನ್ನು ತೊರೆದು ನಾಡಿಗಾಗಿ ದುಡಿಯುತ್ತಿರುವುದು ಶ್ಲಾಘನೀಯ ಎಂದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕೋಳೇರ ದಿನು, ನಿರ್ದೇಶಕರುಗಳಾದ ಸುವೀನ್, ತಾರ, ಸರಸ್ವತಿ, ಜಾಲಿ ತಿಮ್ಮಯ್ಯ, ಅರುಣ್ ಬೆಳ್ಳಿಯ್ಯಪ್ಪಮಯ್ಯ, ಅಬ್ದುಲ್ ಅಸೀಸ್, ಬೋಸ್ ಸೋಮಯ್ಯ, ವಿಠಲ ಹಾಗೂ ಕಿಶಾನ್ ಉತ್ತಪ್ಪ ಹಾಜರಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ನಾಯ್ಡು ವಂದಿಸಿದರು.