* ಗೋಣಿಕೊಪ್ಪಲು, ಜು. 7: ಕೋವಿಡ್ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿ ರುವ ಹುದಿಕೇರಿಯ 4 ಮಂದಿ ಆಶಾ ಕಾರ್ಯಕರ್ತೆಯರಿಗೆ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೂ. 3000 ಸಾವಿರ ಸಹಾಯಧನ ನೀಡಲಾಯಿತು. ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್ ಮುತ್ತಪ್ಪ ಚೆಕ್ ನೀಡಿದರು. ಬಳಿಕ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಜೀವ ಭಯ ತೊರೆದು ಕೊರೊನಾ ವೈರಾಣುವಿ ನಿಂದ ಬಳಲುತ್ತಿರು ವವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಂಥವರಿಗೆ ರಾಜ್ಯ ಸರ್ಕಾರ ಸಹಕಾರ ಇಲಾಖೆ ಮೂಲಕ ಸಹಾಯ ಧನ ನೀಡಲು ಸೂಚಿಸಿದೆ. ತಮ್ಮ ಸಂಘದ ವ್ಯಾಪ್ತಿಗೆ ಒಳಪಡುವ ಕಾರ್ಯಕರ್ತೆಯರಿಗೆ ಈ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು. ಸಂಘದ ಉಪಾಧ್ಯಕ್ಷ ನರೇಂದ್ರ, ನಿರ್ದೇಶಕರಾದ ತ್ರಶನ್, ಧನು, ಕಳ್ಳೇಂಗಡ ಸುರೇಶ್, ನವೀನ್, ಮಿಕ್ಕಿ ಮಾದಯ್ಯ, ರಘು, ರಮೇಶ್, ಮಾಚಮ್ಮ ಸೀತಮ್ಮ, ಕೃಷ್ಣ, ಸಿಇಒ ಎಂ.ಎಂ. ತಮ್ಮಯ್ಯ ಹಾಜರಿದ್ದರು.