ಮಡಿಕೇರಿ, ಜು. 6: ಇಲ್ಲಿನ ದಿವ್ಯಜ್ಯೋತಿ ಸಹಕಾರ ಬ್ಯಾಂಕ್ ನೌಕರರಾಗಿದ್ದ, ಪುಟಾಣಿನಗರ ನಿವಾಸಿ ವಿನ್ಸಂಟ್ (55) ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಕುಟುಂಬ ಮೂಲಗಳು ತಿಳಿಸಿವೆ. ಅಂತ್ಯಕ್ರಿಯೆಯನ್ನು ಕ್ರೈಸ್ತ ಸಮುದಾಯದ ಸ್ಮಶಾನದಲ್ಲಿ ಕೋವಿಡ್ ನಿಯಮಾನುಸಾರ ಅಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ಈ ಬಗ್ಗೆ ಪ್ರಯೋಗಾಲಯ ವರದಿ ಇನ್ನಷ್ಟೆ ಬರಬೇಕಿದೆ ಎಂದು ಸಮುದಾಯದ ಪ್ರಮುಖ ಕೆ.ಟಿ. ಬೇಬಿಮ್ಯಾಥ್ಯೂ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.