ಕೂಡಿಗೆ, ಜು. 6: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದಲ್ಲಿರುವ. ಬ್ರಿಟಿಷರ ಕಾಲದ ಸೆರೆಮನೆಯ ಕಟ್ಟಡವು ಗಿಡಗಂಟೆಗಳು ಬೆಳೆದು ಕಾಡುಮಯವಾಗಿದೆ.

ಬ್ರಿಟಿಷ್ ಸರ್ಕಾರದ ಅಳ್ವಿಕೆಗೆ ಸಂದರ್ಭದಲ್ಲಿ ಕಳ್ಳತನ ಮಾಡಿದ ಕೈದಿಗಳನ್ನು ಸೆರೆಮನೆಗೆ ಕಳುಹಿಸುತ್ತಿದ್ದ ಕಟ್ಟಡವೊಂದು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮೀಪ ಇದೆ. ಇದು ಬ್ರಿಟಿಷ್ ಸಾಮ್ರಾಜ್ಯದ ನಂತರ ದಿನಗಳಲ್ಲಿ ಕೊಡಗು ಸರಕಾರದ ಸಂದರ್ಭದಲ್ಲಿ ಈ ಕಟ್ಟಡವನ್ನು ಹೋಬಳಿ ಕೇಂದ್ರವಾಗಿ ಬಳಸಿಕೊಂಡು ಸರಕಾರ ಮತ್ತು ಆಡಳಿತದ ವ್ಯವಸ್ಥೆಯನ್ನು ನಡೆಸಿರುತ್ತಾರೆ.

(ಮೊದಲ ಪುಟದಿಂದ) ಇದಕ್ಕೆ ಅನೇಕ ಮಾಹಿತಿಗಳು ಇವೆ. 30 ವರ್ಷಗಳ ಹಿಂದೆ ಈ ಕಟ್ಟಡದಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ತರಗತಿಗಳು ಸಹ ನಡೆದಿವೆ.

ಈ ಕಟ್ಟಡವು ಇದೀಗ ಹಾಸನ - ಕುಶಾಲನಗರ ಹೆದ್ದಾರಿ ಪಕ್ಕದಲ್ಲಿಯೇ ಪಾಳು ಬಿದ್ದಿದೆ. ಇದುವರೆಗೂ ಕಂದಾಯ ಇಲಾಖೆಯವರು ಇದರ ಬಗ್ಗೆ ಗಮನಹರಿಸಲು ಮುಂದಾಗಿಲ್ಲ. ಶಾಲೆಗೆ ಹೊಸ ಕಟ್ಟಡಗಳು ಬರತೊಡಗಿದಾಗ ಇದು ಪಾಳು ಬಿದ್ದಿದೆ. ಈ ಕಟ್ಟಡ ಸೆರೆಮನೆಯ ಕಟ್ಟಡವಾಗಿರುವುದರಿಂ ದ ಬಹಳ ಗಟ್ಟಿಮುಟ್ಟಾಗಿದೆ. ಇದನ್ನು ಸಂಬಂಧಿಸಿದ ಇಲಾಖೆಯವರು ಸ್ವಾಧೀನಪಡಿಸಿಕೊಂಡು ಸರಕಾರಿ ಸದುಪಯೋಗಕ್ಕೆ ಬಳಸಿಕೊಳ್ಳಬಹುದಾಗಿದೆ.

-ಕೆ.ಕೆ.ಎನ್. ಶೆಟ್ಟಿ