ಮಡಿಕೇರಿ, ಜು. 6: ಕಳೆದ ಎರಡು ವರ್ಷಗಳಿಂದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದೊಂದಿಗೆ ಭೂಕುಸಿತ, ಪ್ರವಾಹ ಎದುರಾಗಿದ್ದ ಸ್ಥಳಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕಾಲೂರು, ದೇವಸ್ತೂರು ಮುಂತಾದೆಡೆ ತೆರಳಿ ಖುದ್ದು ಮಾಹಿತಿ ಪಡೆದುಕೊಂಡರು.

ಅಲ್ಲದೆ ಕಾವೇರಿ ನದಿ ಪಾತ್ರದ ಕೊಟ್ಟಮುಡಿ, ಚೆರಿಯಪರಂಬು ಇತರೆಡೆಗಳಿಗೆ ಧಾವಿಸಿದ ಅವರು, ಅಲ್ಲಿನ ಜನತೆಯ ಅಹವಾಲು ಪಡೆದುಕೊಂಡರು. ಮಳೆ ತೀವ್ರಗೊಂಡರೆ ಪೊಲೀಸ್ ಇಲಾಖೆಯಿಂದ ಅನುಸರಿಸಬೇಕಾದ ಮಾರ್ಗೋಪಾಯಗಳ ಕುರಿತು ಪೊಲೀಸ್ ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳೊಂದಿಗೆ ಚರ್ಚಿಸಿದರು. ಎಸ್‍ಪಿ ಕ್ಷಮಾಮಿಶ್ರಾ ಅವರೊಂದಿಗೆ ಪೊಲೀಸ್ ವಿಶೇಷ ಘಟಕ ಇನ್ಸ್‍ಪೆಕ್ಟರ್ ಐ.ಪಿ. ಮೇದಪ್ಪ ಹಾಗೂ ಗ್ರಾಮಾಂತರ ಇನ್ಸ್‍ಪೆಕ್ಟರ್ ದಿವಾಕರ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ನಾಪೆÇೀಕ್ಲು: ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಾದ ಕಾವೇರಿ ನದಿ ತೀರದ ಚೆರಿಯಪರಂಬು ಹಾಗೂ ಬೊಳಿಬಾಣೆಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಎನ್‍ಡಿಆರ್‍ಎಫ್ ತಂಡ, ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ಆರ್.ಕಿರಣ್, ಮತ್ತಿತರರು ಇದ್ದರು.