ಮಡಿಕೇರಿ, ಜು. 6: ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 1.45 ಇಂಚು ಮಳೆಯಾಗಿದೆ. ಇದುವರೆಗೆ ಒಟ್ಟು 20.78 ಇಂಚು ಮಳೆಯೊಂದಿಗೆ, ಕಳೆದ ವರ್ಷ ಈ ವೇಳೆಗೆ 15.70 ಇಂಚು ದಾಖಲಾಗಿತ್ತು. ಕಳೆದ 24 ಗಂಟೆಗಳಲ್ಲಿ ಮಡಿಕೇರಿ ತಾಲೂಕು 1.59 ಇಂಚು, ಇದುವರೆಗೆ ಒಟ್ಟು 29.59 ಇಂಚು, ಕಳೆದ ಸಾಲಿನಲ್ಲಿ 20.16 ಇಂಚು ದಾಖಲಾಗಿತ್ತು.
ಸೋಮವಾರಪೇಟೆ ತಾಲೂಕಿಗೆ 0.33 ಇಂಚು, ವರ್ಷಾರಂಭದಿಂದ ಇದುವರೆಗೆ 10.63 ಇಂಚು, ಕಳೆದ ವರ್ಷ ಈ ಅವಧಿಗೆ 9.40 ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿಗೆ ಪ್ರಸಕ್ತ 1.83 ಇಂಚು ಹಾಗೂ ಒಟ್ಟು 15.74 ಇಂಚು ಮಳೆ ಬಿದ್ದಿದೆ. ಕಳೆದ ಸಾಲಿನಲ್ಲಿ 17.52 ಇಂಚು ದಾಖಲಾಗಿತ್ತು.
ಕಳೆದ 24 ಗಂಟೆಗಳಲ್ಲಿ ಮಡಿಕೇರಿ 0.92, ನಾಪೋಕ್ಲು 1.17, ಸಂಪಾಜೆ 1.26, ಭಾಗಮಂಡಲ 2.40 ಇಂಚು ಮಳೆ ದಾಖಲಾಗಿದೆ. ವೀರಾಜಪೇಟೆ 1 ಇಂಚು, ಹುದಿಕೇರಿ 3 ಇಂಚು, ಶ್ರೀಮಂಗಲ 2.71 ಇಂಚು, ಪೊನ್ನಂಪೇಟೆ 2.40, ಅಮ್ಮತ್ತಿ 0.35 ಹಾಗೂ ಬಾಳೆಲೆ 1.55 ಇಂಚು ಮಳೆಯಾಗಿದೆ.
ಸೋಮವಾರಪೇಟೆ 0.77, ಶನಿವಾರಸಂತೆ 0.72, ಶಾಂತಳ್ಳಿ 2.23 ಇಂಚು, ಕೊಡ್ಲಿಪೇಟೆ 1.14 ಹಾಗೂ ಕುಶಾಲನಗರ 0.15, ಸುಂಟಿಕೊಪ್ಪ 0.51, ಹಾರಂಗಿ 0.72 ಇಂಚು ಮಳೆ ಬಿದ್ದಿದೆ. ಹಾರಂಗಿ ಜಲಾಶಯದಲ್ಲಿ 2844.31 ಅಡಿ ನೀರು ಶೇಖರಣೆಯಾಗಿದ್ದು, ಕಳೆದ ವರ್ಷ 2810.62 ಅಡಿ ಮಾತ್ರ ನೀರಿತ್ತು.