ಕೂಡಿಗೆ, ಜು. 5: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯ ಎರಡು ಕಡೆಗಳಲ್ಲಿ ಪಂಚಾಯಿತಿ ಸಿಬ್ಬಂದಿಗಳು ಶುಚಿತ್ವಗೊಳಿಸಿದರು. ಸೇತುವೆ ಮೇಲೆ ಹುಲ್ಲು ಬೆಳೆದಿರುವುದರಿಂದ ಮಳೆಯ ನೀರು ಸೇತುವೆಯ ಮೇಲೆ ನಿಂತು ವಾಹನಗಳು ಚಲಿಸುವ ಸಂದರ್ಭ ಸಾರ್ವಜನಿಕರಿಗೆ, ವಿದ್ಯಾರ್ಥಿಗಳು, ನೌಕರರು ತಿರುಗಾಡಲು ಸಾಧ್ಯವಾಗುತ್ತಿರಲಿಲ್ಲ. ಪಂಚಾಯಿತಿ ಸದಸ್ಯ ಕೃಷ್ಣ ನೇತೃತ್ವದಲ್ಲಿ ಶುಚಿತ್ವ ನಡೆಯಿತು.