ಮಡಿಕೇರಿ, ಜು. 5: ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಕೆಲವು ಹಿಂದೂ ಸಂಘಟನೆಗಳ ಸ್ವಯಂಸೇವಕರು, ಕಾರ್ಯಕರ್ತರು ಗುರು ಪೌರ್ಣಿಮೆ (ವ್ಯಾಸ ಪೂರ್ಣಿಮೆ) ದಿನವಾದ ಆಷಾಢ ಹುಣ್ಣಿಮೆಯಂದು ಆಚರಿಸುತ್ತಿದ್ದ ಸಾಮೂಹಿಕ ಗುರುಪೂಜೆಯನ್ನು ಈ ಬಾರಿ ಮನೆಗಳಲ್ಲಿ ಆಚರಿಸಿದರು.
ಸಂಘದ ಸಲಹೆ ಮೇರೆಗೆ ಆರ್.ಎಸ್.ಎಸ್. ಸ್ವಯಂಸೇವಕರು ಇಂದು ತಮ್ಮ ತಮ್ಮ ಮನೆಗಳಲ್ಲಿ ಗುರು ಭಗವಾಧ್ವಜಕ್ಕೆ ನಮನ ಸಲ್ಲಿಸಿ ಪುಷ್ಪಾರ್ಚನೆಗೈದರು.
ಈ ಬಾರಿ ಇದೊಂದು ವಿಶಿಷ್ಟ ರೀತಿ ಆಚರಣೆಯಾಗಿದ್ದು, ಕೊರೊನಾ ನಡುವೆ ಆರೋಗ್ಯ ದೃಷ್ಟಿಯಿಂದ ಹಿರಿಯರ ಮಾರ್ಗದರ್ಶನದಂತೆ ಈ ಆಚರಣೆ ಮಾಡಲಾಯಿತು ಎಂದು ಸಂಘದ ಪ್ರಮುಖರೊಬ್ಬರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.
ಗೋಣಿಕೊಪ್ಪಲು: ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರು ಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆ 5-30 ಗಂಟೆಗೆ ಮಂಗಳಾರತಿಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು ರಾತ್ರಿ 7.30 ಗಂಟೆಯವರೆಗೂ ನಡೆಯಿತು.
ಕೀರ್ತನೆ, ವೇದ ಘೋಷ, ಭಜನೆ, ವಿಶೇಷ ಪೂಜೆ, ವಿಷ್ಣು ಸಹಸ್ರನಾಮ ಪಾರಾಯಣ, ಪ್ರಸಾದ ವಿನಿಯೋಗ, ಪ್ರವಚನಗಳು ನಡೆದವು.
ಆಶ್ರಮದ ಬೊದಸ್ವರೂಪಾನಂದ ಸ್ವಾಮಿಯವರು ಗುರುಪೂರ್ಣಿಮೆ ಕುರಿತು ಪ್ರವಚನ ನೀಡಿದರು.
ಸ್ವಾಮಿ ಪರಹಿತನಂದಾಜಿ, ಸ್ವಾಮಿ ಇಷ್ಟ ಸೇವಾನಂದಾ, ಸೇರಿದಂತೆ ಆಶ್ರಮ ಅನುಯಾಯಿಗಳು, ಭಕ್ತರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.