ಮಡಿಕೇರಿ, ಜು. 5: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಇವರುಗಳಿಗೆ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಜಿಲ್ಲೆಯಲ್ಲಿ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೋವಿಡ್-19 ಸೋಂಕು ದೃಢಪಟ್ಟ ಅಥವಾ ಶಂಕಿತ ಪ್ರಕರಣಗಳಲ್ಲಿ ಮೃತರಾದಲ್ಲಿ ಸದರಿ ಮೃತದೇಹವನ್ನು ನಿಯಮಾನುಸಾರ ವೈಜ್ಞಾನಿಕ ರೀತಿಯಲ್ಲಿ ಅಂತ್ಯಸಂಸ್ಕಾರ, ಸಮಾಧಿ ಮಾಡಬೇಕಾಗಿದ್ದು, ಆದ್ದರಿಂದ ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಅನಿರೀಕ್ಷಿತವಾಗಿ ಸಂಭವಿಸಿದಲ್ಲಿ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಈ ಕೆಳಕಂಡಂತೆ ವೈದ್ಯಾಧಿಕಾರಿ, ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನೇಮಿಸಿ ಆದೇಶಿಸಿದ್ದಾರೆ.
ಕ್ರ.ಸಂ ನಿರ್ವಹಿಸಬೇಕಾದ ಕರ್ತವ್ಯ ನೇಮಿಸಲಾದ ವೈದ್ಯಾಧಿಕಾರಿ-ಅಧಿಕಾರಿ-ಸಿಬ್ಬಂದಿಗಳ ವಿವರ
1 ಎಲ್ಲಾ ವಿಚಾರಗಳಲ್ಲಿ ನೇತೃತ್ವ ಮತ್ತು ಮೇಲುಸ್ತುವಾರಿ ಉಪವಿಭಾಗಾಧಿಕಾರಿ, ಮಡಿಕೇರಿ ಉಪ ವಿಭಾಗ, ಮಡಿಕೇರಿ.
2 ಮರಣ ಹೊಂದಿದ ಬಗ್ಗೆ ದೃಢೀಕರಣವನ್ನು ಕರ್ತವ್ಯ ನಿರತ ವೈದ್ಯರು, ಕೋವಿಡ್ ಆಸ್ಪತ್ರೆ
ಆಸ್ಪತ್ರೆಯಿಂದ ನೀಡುವುದು.
3 ಮೃತ ಶರೀರ ಹಸ್ತಾಂತರಿಸುವ ಮುಂಚಿತವಾಗಿ ಫೋರೆನ್ಸಿಕ್ ಮೆಡಿಸಿನ್ ವಿಭಾಗ ಮುಖ್ಯಸ್ಥರ ನೇತೃತ್ವದ ತಂಡ ನಡೆಸುವುದು.
ಕೈಗೊಳ್ಳಬೇಕಾದ ಪೂರ್ವ ತಯಾರಿ.
4 ಕೋವಿಡ್ ಮೃತದೇಹವನ್ನು ಇರಿಸುವುದಕ್ಕೆ ಪ್ರತ್ಯೇಕ 1. ಡೀನ್ - ಡೈರೆಕ್ಟರ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ.
ಶವಾಗಾರ ರಚನೆ ಮತ್ತು ಅಗತ್ಯ ಸೌಲಭ್ಯಗಳನ್ನು 2. ಫೋರೆನ್ಸಿಕ್ ಮೆಡಿಸಿನ್ ವಿಭಾಗ ಮುಖ್ಯಸ್ಥರು.
ಒದಗಿಸುವುದು.
5 ಮೃತ ಶರೀರವನ್ನು ಕೋವಿಡ್ ಆಸ್ಪತ್ರೆಯ ಶವಾಗಾರಕ್ಕೆ ಫೋರೆನ್ಸಿಕ್ ಮೆಡಿಸಿನ್ ವಿಭಾಗ ಮುಖ್ಯಸ್ಥರ ನೇತೃತ್ವದ ತಂಡ ನಡೆಸುವುದು.
ವರ್ಗಾಯಿಸುವುದು. ಇದರೊಂದಿಗೆ ಸಹಕಾರಕ್ಕಾಗಿ ಗ್ರೂಪ್-ಡಿ ಅಥವಾ ಸ್ವಯಂಸೇವಕರನ್ನು ಸಂಬಂಧಪಟ್ಟ ತಾಲೂಕು ತಹಶೀಲ್ದಾರರು, ನಗರಸಭೆ, ಪೌರಾಯುಕ್ತರು, ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ಒದಗಿಸುವುದು.
6 1. ಮೃತರ ಸಂಬಂಧಿಕರಿಗೆ ಮಾಸ್ಕ್, ಸ್ಯಾನಿಟೈಸರ್
ಇತ್ಯಾದಿಗಳನ್ನು ಒದಗಿಸುವುದು (ಗರಿಷ್ಠ 5 ಮಂದಿಗೆ) ಫೋರೆನ್ಸಿಕ್ ಮೆಡಿಸಿನ್ ವಿಭಾಗ ಮುಖ್ಯಸ್ಥರು.
2. ಪಿ.ಪಿ.ಇ. ಮುಂತಾದ ಸುರಕ್ಷತಾ ಕಿಟ್‍ಗಳನ್ನು
ಅಧಿಕಾರಿ, ಸ್ವಯಂ ಸೇವಕರಿಗೆ ಒದಗಿಸುವುದು.
(ಗರಿಷ್ಠ 5 ಮಂದಿ ಸ್ವಯಂಸೇವಕರು).
7 ಅಂತ್ಯ ಸಂಸ್ಕಾರಕ್ಕೆ ಮುಂತಾದ ಕಾರ್ಯಗಳಿಗೆ
ಸಂಬಂಧಿಸಿದಂತೆ ಕಾರ್ಯ ವಿಧಾನ (SಔP)ವನ್ನು ಫೋರೆನ್ಸಿಕ್ ಮೆಡಿಸಿನ್ ವಿಭಾಗ ಮುಖ್ಯಸ್ಥರು.
ವಿವರಿಸುವುದು ಮತ್ತು ಶವಾಗಾರದ ಬಳಿ
ಪ್ರಚುರಪಡಿಸುವುದು.
8 ಅಗತ್ಯವಿದ್ದಲ್ಲಿ ಮೃತರ ಸಂಬಂಧಿಕರೊಂದಿಗೆ
ಸಮಾಲೋಚನೆ. ಮನಶಾಸ್ತ್ರ ವಿಭಾಗದ ಮುಖ್ಯಸ್ಥರು.
9 ಸಮಾಧಿ ಸ್ಥಳ, ಅಂತ್ಯಸಂಸ್ಕಾರ ಪ್ಲಾಟ್ ಫಾರಂ ರಚನೆ. ಸಂಬಂಧಪಟ್ಟ ತಾಲೂಕು ತಹಶೀಲ್ದಾರರೊಂದಿಗೆ ನಗರಸಭೆ ಪೌರಾಯುಕ್ತರು,
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ.
10 ಸಮಾಧಿ ಸ್ಥಳ, ಅಂತ್ಯಸಂಸ್ಕಾರ ಪ್ಲಾಟ್ ಫಾರಂಗೆ ನಗರಸಭೆ ಪೌರಾಯುಕ್ತರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ತಾಲೂಕು
ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿರವದೊಂದಿಗೆ ಗ್ರಾಮ ಪಂಚಾಯಿತಿ
ಒದಗಿಸುವುದು. ಅಭಿವೃದ್ಧಿ ಅಧಿಕಾರಿಗಳು.
11 ಸಮಾಧಿ ಕಾರ್ಯಕ್ಕೆ ಅಗತ್ಯವಿರುವ ಜೆ.ಸಿ.ಬಿ.ಯಂತಹ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಮಡಿಕೇರಿ.
ಯಂತ್ರೋಪಕರಣಗಳನ್ನು ಒದಗಿಸುವುದು.
12 ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಕಟ್ಟಿಗೆಗಳನ್ನು ಸ್ಥಳಕ್ಕೆ 1. ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ.
ಒದಗಿಸುವುದು. 2. ಉಪ ಅರಣ್ಯ ಸಂರಕ್ಷಣಾಧಿಕಾರಿ, ವೀರಾಜಪೇಟೆ ವಿಭಾಗ.
13 ಸಮಾಧಿ ಸ್ಥಳಕ್ಕೆ ಮೃತ ಶರೀರವನ್ನು ಕೊಂಡೊಯ್ಯಲು 1. ಡೀನ್-ಡೈರೆಕ್ಟರ್, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ.
ಆಂಬುಲೆನ್ಸ್, ವಿಶೇಷ ವಾಹನದ ಒದಗಿಸುವುದು. 2. ಫೋರೆನ್ಸಿಕ್ ಮೆಡಿಸಿನ್ ವಿಭಾಗ ಮುಖ್ಯಸ್ಥರು.
14 ಮೃತ ಶರೀರವನ್ನು ಕೊಂಡೊಯ್ಯುವಾಗ ಪ್ರತ್ಯೇಕ 1. ಪೊಲೀಸ್ ಉಪ ಅಧೀಕ್ಷಕರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದು.
ವಾಹನದಲ್ಲಿ ಜೊತೆಗಿರುವುದು. 2. ಓರ್ವ ಗ್ರಾ.ಲೆ., ಪಿ.ಡಿ.ಒ., ಕಂದಾಯ ಪರಿವೀಕ್ಷಕರನ್ನು ರೊಟೇಶನ್ ಪದ್ಧತಿಯಲ್ಲಿ ತಹಶೀಲ್ದಾರರು ನಿಯೋಜಿಸುವುದು.
15 ಬ್ಯಾರಿಕೇಡಿಂಗ್ ಮುಂತಾದ ವ್ಯವಸ್ಥೆ ಮತ್ತು ಕಾನೂನು ಸಂಬಂಧಪಟ್ಟ ತಾಲೂಕಿನ ಪೊಲೀಸ್ ಉಪ ಅಧೀಕ್ಷಕರು.
ಸುವ್ಯವಸ್ಥೆ ಕಾಪಾಡುವುದು.
16 ಸಮಾಧಿ, ಅಂತ್ಯಸಂಸ್ಕಾರ ಸಂದರ್ಭ ಪೂರ್ಣ ತಹಶೀಲ್ದಾರರಿಂದ ನೇಮಿಸಲ್ಪಟ್ಟ ಅಧಿಕಾರಿ, ಸಿಬ್ಬಂದಿಗಳು.
ವೀಡಿಯೋಗ್ರಾಫಿ.
17 ವರದಿ ಸಲ್ಲಿಸಬೇಕಾದ ಅಧಿಕಾರಿ. ತಹಶೀಲ್ದಾರರಿಂದ ವೀಡಿಯೋಗ್ರಾಫಿಯೊಂದಿಗೆ ಸಮಗ್ರ ವರದಿಯನ್ನು ಉಪ ವಿಭಾಗಾಧಿಕಾರಿಯವರಿಗೆ ಸಲ್ಲಿಸುವುದು. ಉಪ ವಿಭಾಗಾಧಿಕಾರಿಯವರು ಈ
ವರದಿಯನ್ನು ಕಾಪಾಡಿಕೊಳ್ಳುವುದು.
18 ತಹಶೀಲ್ದಾರರು ಮತ್ತು ಆರಕ್ಷಕ ಉಪ ಅಧಿಕ್ಷಕರಿಂದ ಫೋರೆನ್ಸಿಕ್ ಮೆಡಿಸಿನ್ ವಿಭಾಗ ಮುಖ್ಯಸ್ಥರು ಮತ್ತು ಸಂಬಂಧಪಟ್ಟ ತಾಲೂಕು
ಗುರುತಿಸಲ್ಪಟ್ಟ ಸ್ವಯಂ ಸೇವಕರಿಗೆ ಸೂಕ್ತ ತರಬೇತಿ ಆರೋಗ್ಯಾಧಿಕಾರಿಗಳು.
ನೀಡುವುದು.
19 ಅಧಿಕಾರಿ ಮತ್ತು ಸ್ವಯಂ ಸೇವಕರು ಉಪಯೋಗಿಸಿದ
ಪಿ.ಪಿ.ಇ. ಕಿಟ್ ಮುಂತಾದ ಸುರಕ್ಷತಾ ಸಾಧನಗಳನ್ನು ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳು.
ಬಯೋ ಮೆಡಿಕಲ್ ತ್ಯಾಜ್ಯ ವಿಲೇವಾರಿ ರೀತಿಯಲ್ಲಿ
ವಿಲೇವಾರಿ ಮಾಡುವುದು.
20 ಮೃತರ ಅತೀ ಹತ್ತಿರದ ಸಂಬಂಧಿಗಳನ್ನು 14 ದಿನಗಳ ಗೃಹ
ಸಂಪರ್ಕ ತಡೆಯಲ್ಲಿ ಇರಿಸುವುದು ಮತ್ತು ಚಾಲ್ತಿಯಲ್ಲಿರುವ ಸಂಬಂಧಪಟ್ಟ ತಾಲೂಕು ತಹಶೀಲ್ದಾರರು ಮತ್ತು ತಾಲೂಕು
ಪ್ರೋಟೋಕಾಲ್‍ನಂತೆ ಗಂಟಲ ದ್ರವ ಮಾದರಿಯನ್ನು ಆರೋಗ್ಯಾಧಿಕಾರಿಗಳು.
ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವುದು.