ನಾಪೆÇೀಕ್ಲು, ಜು. 5: ನಾಪೆÇೀಕ್ಲು - ಮೂರ್ನಾಡು ಮುಖ್ಯ ರಸ್ತೆಯ ಹೊದ್ದೂರು ಮಾರಿಕಾಂಬ ದೇವಸ್ಥಾನದ ಬಳಿ ರಸ್ತೆಯಲ್ಲಿ ಕೆಸರು ತುಂಬಿಕೊಂಡು ಸಂಚರಿಸಲಾಗದೆ ಜನರು, ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ರಸ್ತೆಯ ಬೊಳಿಬಾಣೆಯಿಂದ ಹೊದ್ದೂರು ಪ್ರಾಥಮಿಕ ಶಾಲೆಯವರೆಗೆ ನೂತನವಾಗಿ ರಸ್ತೆಗೆ ಡಾಮರು ಹಾಕಿ ದುರಸ್ತಿ ಗೊಳಿಸಲಾಗಿದೆ. ಆದರೆ ಮಾರಿಕಾಂಬ ದೇವಸ್ಥಾನದ ಬಳಿ ಕೆಲವು ಮೀ.ಗಳಷ್ಟು ದೂರದ ರಸ್ತೆಯ ಹಳೆ ಡಾಮರು ತೆಗೆದು ಹಾಕಿ ರಸ್ತೆ ನಿರ್ಮಿಸದೆ ಹಾಗೆಯೇ ಬಿಡಲಾಗಿದೆ. ಈ ಹಿನೆÀ್ನಲೆಯಲ್ಲಿ ರಸ್ತೆಯಲ್ಲಿ ಮಳೆ ನೀರು ಮತ್ತು ಮಣ್ಣು ತುಂಬಿಕೊಂಡು ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಿಸಿದ ಇಲಾಖೆ ಈ ರಸ್ತೆಯ ಬಗ್ಗೆ ಕೂಡಲೇ ಗಮನಹರಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡ ಬೇಕೆಂದು ವಾಹನ ಸವಾರರು, ಸಾರ್ವಜನಿಕರು ಆಗ್ರಹಿಸಿದ್ದಾರೆ.