ಮಡಿಕೇರಿ, ಜು. 4: ತಾ. 5ರಂದು (ಇಂದು) ಅಮೇರಿಕಾ, ಮೆಕ್ಸಿಕೊ, ಕೆನಡಾ, ಆಫ್ರಿಕಾದ ಕೆಲವು ರಾಷ್ಟ್ರಗಳು ಸೇರಿದಂತೆ ಯೂರೋಪಿನ ಹಲವು ರಾಷ್ಟ್ರಗಳಲ್ಲಿ ಚಂದ್ರ ಗ್ರಹಣ ಗೋಚರವಾಗಲಿದೆ. ಭಾರತದಲ್ಲಿ ಈ ಸಂದರ್ಭ ಬೆಳಿಗ್ಗೆ ಸುಮಾರು 8.30 ರ ಸಮಯವಾಗಿರಲಿದ್ದು, ಚಂದ್ರನು ಬಾನಂಚಿನ ಹೊರ ಇರಲಿರುವ ಕಾರಣ ರಾಷ್ಟ್ರದಲ್ಲಿ ಗ್ರಹಣ ಗೋಚರವಾಗುವುದಿಲ್ಲ. ಈ ಸಂಬಂಧ ಯಾವುದೇ ವೃತ ಆಚರಣೆ ಅವಶ್ಯವಿರುವುದಿಲ್ಲ.