ಕುಶಾಲನಗರ, ಜು. 4 : ಕುಶಾಲನಗರ ಪ್ರವಾಸಿ ಮಂದಿರ ಇದೀಗ ಸಂಪೂರ್ಣ ಲಾಕ್‍ಡೌನ್ ಆಗಿದೆ. ಪ್ರವಾಸಿ ಮಂದಿರವನ್ನು ಕೆಲವು ಸಂಘಸಂಸ್ಥೆಗಳು ಮತ್ತು ರಾಜಕೀಯ ವ್ಯಕ್ತಿಗಳು ಅಕ್ರಮವಾಗಿ ತಮ್ಮ ಕಾರ್ಯಕ್ರಮ ಚಟುವಟಿಕೆಗಳಿಗೆ ಬಳಸುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ತಕ್ಷಣ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರವಾಸಿ ಮಂದಿರದ ಮುಂಭಾಗದ ಗೇಟ್‍ಗೆ ಬೀಗ ಜಡಿದು ಸೂಚನಾ ಫಲಕಗಳನ್ನು ಅಳವಡಿಸುವುದರೊಂದಿಗೆ ಕ್ರಮಕೈಗೊಂಡ ದೃಶ್ಯ ಕಂಡುಬಂದಿದೆ.