ಗೋಣಿಕೊಪ್ಪ, ಜು. 3 : ನೆಮ್ಮಲೆ ಗ್ರಾಮದ ಚೆಟ್ಟಂಗಡ ನವೀನ್ ಭೀಮಯ್ಯ ಅವರಿಗೆ ಸೇರಿದ ಹಸುವಿನ ಮೇಲೆರಗಲು ಬಂದಿದ್ದ ಜನರ ಕೂಗಾಟಕ್ಕೆ ಬಿಟ್ಟು ಓಡಿ ಹೋಗಿದೆ.
ಶುಕ್ರವಾರ ಮುಂಜಾನೆ ಘಟನೆ ನಡೆದಿದ್ದು, ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೆಲೆ ಚಿರತೆ ದಾಳಿಗೆ ಮುಂದಾಗಿದೆ. ಶಬ್ಧ ಕೇಳಿ ಮನೆಯವರು ಕೂಗಿದ್ದಾರೆ. ಇದರಿಂದ ಚಿರತೆ ಹಸುವನ್ನು ಬಿಟ್ಟು ಪರಾರಿಯಾಗಿದ್ದು, ಹಸುವಿನ ಪ್ರಾಣ ಉಳಿದಂತಾಗಿದೆ. ಹಸುವಿನ ಕುತ್ತಿಗೆ ಭಾಗದಲ್ಲಿ ಸಣ್ಣ ಗಾಯವಾಗಿದೆ.
ಒತ್ತಾಯ : ಮಾಹಿತಿ ಅರಿತು ವಿರಾಜಪೇಟೆ ಮಂಡಲ ಬಿಜೆಪಿ ಕೃಷಿ ಮೋರ್ಚ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ ಗ್ರಾಮಸ್ಥರೊಂದಿಗೆ ಶ್ರೀಮಂಗಲ ವನ್ಯಜೀವಿ ವಲಯ ಅಧಿಕಾರಿ ವೀರೇಂದ್ರ ಅವರನ್ನು ಸ್ಥಳಕ್ಕೆ ಬರ ಮಾಡಿಕೊಂಡು ಚಿರತೆಯ ಓಡಾಟದಿಂದ ಗ್ರಾಮದ ಜನರು ಭಯ ಬೀತರಾಗಿದ್ದಾರೆ. ಇಲಾಖೆಯು ಮುಂದಿನ ಅನಾಹುತ ಸಂಭವಿಸುವುದರ ಒಳಗಾಗಿ ಚಿರತೆಯನ್ನು ಓಡಿಸಿ ಎಂದು ಒತ್ತಾಯಿಸಿದರು. ಅಧಿಕಾರಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭ ಸ್ಥಳೀಯರಾದ ಚೆಟ್ಟಂಗಡ ಮಹೇಶ್ ಮಂದಣ್ಣ, ಕಟ್ಟೇರ ಕವನ್, ರೈತ ಮುಖಂಡ ಮಲ್ಲಂಗಡ ಮಿಲನ್, ಚೆಟ್ಟಂಗಡ ಕಂಬಣ್ಣ ಇದ್ದರು.