ಕುಶಾಲನಗರ, ಜು. 3: ದುಬಾರೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ನವೀಕರಿಸಲಾದ ಆನೆ ಮಹಲ್ ವಿಶ್ರಾಂತಿ ಗೃಹವನ್ನು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು. ಇದರೊಂದಿಗೆ ಶಿಬಿರದಲ್ಲಿ ಆರಂಭಿಸಲಾದ ವನ್ಯಜೀವಿ ಚಿಕಿತ್ಸಾ ಕೇಂದ್ರ, ಸಾಕಾನೆ ಶಿಬಿರದಲ್ಲಿನ ಆನೆ ಮಾವುತ ಮತ್ತು ಕಾವಾಡಿಗರಿಗೆ ನಿರ್ಮಿಸಲಾದ ವಸತಿಗೃಹಗಳು ಸೇರಿದಂತೆ ಆನೆಕಾಡು ಮೀಸಲು ಅರಣ್ಯ ಬಳಿಯ ಮೆಟ್ನಳ್ಳ ಗ್ರಾಮದಲ್ಲಿ ಕಳ್ಳಬೇಟೆ ತಡೆ ಶಿಬಿರಕ್ಕೆ ಶಾಸಕ ರಂಜನ್ ಮತ್ತು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಅಜಯ್ ಮಿಶ್ರಾ ಚಾಲನೆ ನೀಡಿದರು. ಈ ಸಂದರ್ಭ ಅಪರ ಅರಣ್ಯ ಸಂರಕ್ಷಣಾ ಅಧಿಕಾರಿ ಜಗನ್ನಾಥ್, ಕೊಡಗು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಕೆ.ವಿ.ನೆಹರು ಸೇರಿದಂತೆ ವಿವಿಧ ವಲಯ ಅರಣ್ಯ ಅಧಿಕಾರಿಗಳು ಇದ್ದರು.