ಸೋಮವಾರಪೇಟೆ, ಜು. 3: ಸರ್ವೆ ಇಲಾಖೆಯಲ್ಲಿ ಸರ್ವೆ ತಪಾಸಕರಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತಿ ಹೊಂದಿದ ಬಿ.ಎಂ.ಹರೀಶ್ಚಂದ್ರ ಅವರನ್ನು ಇಲಾಖೆ ವತಿಯಿಂದ ಬೀಳ್ಕೊಡಲಾಯಿತು.
ತಹಶೀಲ್ದಾರ್ ಗೋವಿಂದರಾಜು ಹಾಗು ಜಿಲ್ಲಾಧಿಕಾರಿಗಳ ಕಚೇರಿಯ ಭೂದಾಖಲೆಗಳ ವಿಭಾಗದ ಉಪನಿರ್ದೆಶಕರಾದ ಶ್ರೀನಿವಾಸ್ ಅವರುಗಳು ಹರಿಶ್ಚಂದ್ರ ಅವರನ್ನು ಸನ್ಮಾನಿಸಿ, ಇಲಾಖೆಯಲ್ಲಿನ 36 ವರ್ಷಗಳ ಉತ್ತಮ ಸೇವೆಗಾಗಿ ಅಭಿನಂದಿಸಿದರು.
ಭೂದಾಖಲೆಗಳ ಸಹಾಯಕ ನಿರ್ದೇಶಕ ಸಿ. ವಿರೂಪಾಕ್ಷ, ಬಿ.ಸಿ.ಎಂ. ಇಲಾಖೆ ಕಲ್ಯಾಣಾಧಿಕಾರಿ ಶ್ರೀಕಾಂತ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.ಕೂಡಿಗೆ, ಜು. 3: ಕೂಡಿಗೆ ಡೈರಿಯಲ್ಲಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಶ್ವನಾಥ್ ಮತ್ತು ಸಾವಿತ್ರಮ್ಮ ಅವರು ಕರ್ತವ್ಯದಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಡೈರಿ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ &divound;ರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್, ಮಾರುಕಟ್ಟೆಯ ವ್ಯವಸ್ಥಾಪಕ ಪ್ರಕಾಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.ಸುಂಟಿಕೊಪ್ಪ, ಜು. 3: ಗರಗಂದೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತಿ ಹೊಂದಿದ ಶಿಕ್ಷಕಿ ಬಿ.ಬಿ. ಜಾನಕಿ ಅವರನ್ನು ಶಾಲೆಯ ವತಿಯಿಂದ ಬೀಳ್ಕೊಡಲಾಯಿತು.
ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಮಾತನಾಡಿ, 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಶಿಕ್ಷಕಿ ಜಾನಕಿ ಅವರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಲ್ಲಿಸಿರುವ ಸೇವೆ ಅನನ್ಯವಾದದ್ದು ಎಂದರು.
ಶಾಲೆಯ ಪರವಾಗಿ ಮುಖ್ಯ ಶಿಕ್ಷಕಿ ಹೆಚ್.ಕೆ. ಪಾರ್ವತಿ ಮತ್ತು ಶಿಕ್ಷಕರು ನಿವೃತ್ತಗೊಂಡ ಶಿಕ್ಷಕಿಗೆ ನೆನಪಿನ ಕಾಣಿಕೆ ನೀಡಿ ಸತ್ಕರಿಸಿ ಅವರ ಸೇವೆಯನ್ನು ಸ್ಮರಿಸಿದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್. ಚೇತನ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್. ಮಂಜುನಾಥ್, ಉಪಾಧ್ಯಕ್ಷೆ ಎಸ್.ಕೆ. ಸೌಭಾಗ್ಯ, ಕಾರ್ಯದರ್ಶಿ ಟಿ.ಕೆ. ಬಸವರಾಜು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸದಾಶಿವ ಎಸ್. ಪಲ್ಲೇದ್, ಮುಖ್ಯ ಶಿಕ್ಷಕಿ ಹೆಚ್.ಕೆ. ಪಾರ್ವತಿ, ಸಿ.ಆರ್.ಪಿ ಬಿ.ಎನ್. ವಸಂತ್‍ಕುಮಾರ್, ಶಿಕ್ಷಣ ಸಂಯೋಜಕ ಎಸ್.ಆರ್. ಶಿವಲಿಂಗ, ಆಲೂರು-ಸಿದ್ದಾಪುರ ಶಾಲೆಯ ಶಿಕ್ಷಕ ಆರ್.ಡಿ. ಮಹೇಶ್, ನಿವೃತ್ತ ಶಿಕ್ಷಕಿ ಹರಿಣಾಕ್ಷಿ ಇತರರು ಇದ್ದರು.