ನಾಪೆÇೀಕ್ಲು, ಜು. 3: ನಗರದಲ್ಲಿ ಮಾಂಸದ ಬೆಲೆಯು ಗಗನಕ್ಕೇರುತ್ತಿದ್ದು ಜನ ಸಾಮಾನ್ಯರು ಮಾಂಸ ತ್ಯಜಿಸುವ ಮಟ್ಟಕ್ಕೆ ಬಂದಿದ್ದಾರೆ. ಕೋಳಿ ಮಾಂಸಕ್ಕೆ ರೂ. 180-200 ಮತ್ತು ಕುರಿ ಮಾಂಸಕ್ಕೆ ರೂ. 600 ಮತ್ತು ಮೀನು ರೂ. 250 ಬೆಲೆ ಇದ್ದು ಇದರಿಂದ ಸಾರ್ವಜನಿಕರಿಗೆ ಮಾಂಸ, ಮೀನು ಕೊಳ್ಳಲು ತೊಂದರೆಯಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯವರು ಮಾಂಸದ ಬೆಲೆಯನ್ನು ಕೋಳಿಗೆ ರೂ. 200 ಮತ್ತು ಕುರಿ ಮಾಂಸಕ್ಕೆ ರೂ. 600 ಎಂದು ಲಾಕ್‍ಡೌನ್ ಸಂದರ್ಭ ನಿಗಧಿಗೊಳಿದ್ದರು ಏಕೆಂದರೆ ಆಗ ಲಾರಿಗಳು ಇಲ್ಲದೆ ಕುರಿ, ಕೋಳಿ ಸಾಗಟಕ್ಕೆ ತೊಂದರೆಯಾಗಿತ್ತು. ಈಗ ಲಾಕ್‍ಡೌನ್ ಸಡಿಲಗೊಂಡು ಸಾಗಾಟಕ್ಕೆ ಯಾವುದೇ ತೊಂದರೆ ಇಲ್ಲದಿದ್ದರು ಬೆಲೆಯಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡದೇ ಅದೇ ರೀತಿ ಮುಂದುವರಿಸಿದ್ದು, ಜಿಲ್ಲಾಧಿಕಾರಿಗಳು ಬೆಲೆಯನ್ನು ಇಂತಿಷ್ಟು ಎಂದು ನಿಗದಿಪಡಿಸಿ ಮಾಂಸ ಪ್ರಿಯರು ಮಾಂಸ ಕೊಳ್ಳಲು ಅನುವು ಮಾಡಿಕೊಡಬೇಕೆಂದು ನಾಪೆÇೀಕ್ಲು ವಿಭಾಗದ ನಾಗರಿಕರು ಮನವಿ ಮಾಡಿದ್ದಾರೆ.