ಕುಶಾಲನಗರ, ಜು. 3: ವಿ.ಪಿ. ಶಶಿಧರ್ ಮೇಲೆ ದಾಖಲಾಗಿರುವ ಪೆÇಲೀಸ್ ದೂರನ್ನು ವಜಾ ಮಾಡಲು ಕೊಡಗು ಜಿಲ್ಲಾ ಪ್ರಗತಿಪರ ವೇದಿಕೆ ಪ್ರಮುಖರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಪ್ರಮುಖ ಇಸಾಕ್ ಖಾನ್, ವಿ.ಪಿ. ಶಶಿಧರ್ ಮೇಲೆ ಕುಶಾಲ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ. ಈ ಬಗ್ಗೆ ಕೊಡಗು ಜನಪರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಮಹಮ್ಮದ್ ಕೂಡ ಪತ್ರಿಕಾ ಹೇಳಿಕೆಯಲ್ಲಿ ಖಂಡನೆ ವ್ಯಕ್ತಪಡಿಸಿ ದ್ದಾರೆ. ಗೋಷ್ಠಿಯಲ್ಲಿ ವೇದಿಕೆ ಪ್ರಮುಖರಾದ ಶಬ್ಬೀರ್, ಕರೀಂ, ರಜಾಕ್, ಶಬ್ಬೀರ್ ಸುಂಟಿಕೊಪ್ಪ ಇದ್ದರು.