ಗೋಣಿಕೊಪ್ಪ ವರದಿ, ಜು. 3 ; ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಕ್ರಮಕೈಗೊಳ್ಳಲು 15 ದಿವಸ ಲಾಕ್‍ಡೌನ್ ಘೋಷಣೆ ಮಾಡಬೇಕು ಎಂದು ಜಿಡಿಎಸ್ ಪಕ್ಷದ ಜಿಲ್ಲಾ ವಕ್ತಾರ ಎಂ. ಟಿ. ಕಾರ್ಯಪ್ಪ ಒತ್ತಾಯಿಸಿದ್ದಾರೆ.

ಕೆಲವು ವ್ಯಾಪಾರಿಗಳು, ಹೋಮ್ ಸ್ಟೇ, ರಿಸಾರ್ಟ್ ಮಾಲೀಕರ ಹುನ್ನಾರದಿಂದ ಜನ ಸಂದಣಿ ಹೆಚ್ಚಾಗುತ್ತಿದೆ. ಪರಸ್ಪರ ಅಂತರ ಮತ್ತು ಮಾಸ್ಕ್ ಬಳಸುತ್ತಿಲ್ಲ. ಹಲವಾರು ಸರಕಾರಿ ಕಚೇರಿಗಳಲ್ಲಿ ಕೂಡಾ ಇದೇ ಪರಿಸ್ಥಿತಿ ಉಂಟಾಗಿದೆ. ಹೊರಗಿನಿಂದ ಬರುವವರನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕಿದೆ. ಕಾನೂನು ಬಾಹಿರವಾಗಿ ಬರುವ ಪ್ರವಾಸಿಗರನ್ನು ತಡೆಯಬೇಕು. ಇದೀಗ ಕೇರಳ ರಾಜ್ಯದ ಗಡಿ ಭಾಗದಿಂದ ಅನೇಕ ಕಾರ್ಮಿಕರು ತೋಟ ಕೆಲಸಕ್ಕೆ ಬರುತ್ತಿದ್ದು ಕೊರೊನಾ ಹರಡುವ ಸಾಧ್ಯತೆ ಇದೆ. ಕೊಡಗಿನ ಮೀನು ಮಾರಾಟವನ್ನು ಸಂಪೂರ್ಣ ನಿಲ್ಲಿಸಬೇಕು. ರಸ್ತೆ ಬದಿ ಮಾರಾಟ ನಿರ್ಬಂಧಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.