ಗೋಣಿಕೊಪ್ಪ ವರದಿ, ಜು. 4: ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಡಾ. ಸುಮನ್ ಡಿ ಪನ್ನೇಕರ್ ಅವರನ್ನು ಸ್ವಯಂ ಪ್ರೇರಣಾ ಬಳಗದ ವತಿಯಿಂದ ಗೌರವಿಸಲಾಯಿತು.
ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಈ ಸಂದರ್ಭ ಬಳಗದ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ಸದಸ್ಯರಾದ ಮೋರ್ಕಂಡ ಮೀನಾ ಗಣಪತಿ, ಮಂಡಂಗಡ ಪುನಿತಾ, ಮೋರ್ಕಂಡ ನಿಖಿಲ್, ಕಳ್ಳಿಚಂಡ ಸುಮಿ, ನೆಲ್ಲಮಕ್ಕಡ ಪ್ರತಿಷ್ಠಾ, ತೀತಿಮಾಡ ಪೂವಮ್ಮ ಇದ್ದರು.