ಕೂಡಿಗೆ, ಜು. 2: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಗುಂದ ಗ್ರಾಮದಲ್ಲಿರುವ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ.

ಹಾರಂಗಿಯ ಜಲಾಶಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಮತ್ತು ಆ ವ್ಯಾಪ್ತಿಯ ಉಪ ನದಿಗಳಿಂದ ನೀರಿನ ಹರಿಯುವಿಕೆ ಸ್ವಲ್ಪ ಮಟ್ಟಿಗೆ ಹೆಚ್ಚುತ್ತಿರುವುದರಿಂದ ಹಾರಂಗಿಗೆ &divound;ೀರು ತುಂಬಲಾರಂಭಿಸಿದೆ.

3.40034 ಟಿಎಂಸಿ ನೀರಿದ್ದು, ಅಣೆಕಟ್ಟೆಗೆ ಒಳಹರಿವು 549 ಕ್ಯೂಸೆಕ್ಸ್ ಇದೆ. ನದಿಗೆ 30 ಕ್ಯೂಸ್ಸೆಕ್ ನೀರು ಹರಿಯುತ್ತಿದೆ. ಈಗಾಗಲೇ ನೀರಿನ ಒಳಹರಿವು ಹೆಚ್ಚಿದೆ ಎಂದು ಅಣೆಕಟ್ಟೆಯ ನಿರ್ವಹಣೆ ಇಂಜಿನಿಯರ್ ನಾಗರಾಜ್ ತಿಳಿಸಿದ್ದಾರೆ.